*ಡಿ.ಕೆ ಶಿವಕುಮಾರ ಸಿಎಂ ಆಗಲಿ: ಎಂಎಲ್ ಸಿ ಚನ್ನರಾಜ್ ಹಟ್ಟಿಹೋಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿಕೆ ಶಿವಕುಮಾರ ಸಿಎಂ ಆಗಬೇಕು ಅನ್ನೋದು ಇಡಿ ಕರ್ನಾಟಕದ ಜನರ ಬಯಕೆ. ಅವರು ಸಿಎಂ ಆಗಲಿ ಅವರಿಗೂ ಒಂದು ಅವಕಾಶ ಸಿಗಲಿ ಅಂತ ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದು ಆಗುತ್ತೆ ಅಂತ ನಂಬಿದ್ದೇವೆ ಎಂದು ಎಂಎಲ್ ಸಿ ಚನ್ನರಾಜ್ ಹಟ್ಟಿಹೋಳಿ ಹೇಳಿಕೆ ನೀಡಿದರು.
ಮಂಗಳವಾರ ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಬ್ಬರು ನಾಯಕರೇ ಹೇಳಿದಾಗ ಮುಂದೆ ಹೈಕಮಾಂಡ್ ಎನು ತೀರ್ಮಾನ ತೆಗೆದುಕೊಳ್ಳುತ್ತೆ ಅದಕ್ಕೆ ನಾವು ಬದ್ಧವಾಗಿದ್ದೇವೆ. ಹೈಕಮಾಂಡ್ ಸಂದೇಶಕ್ಕಾಗಿ ನಾವು ಕಾಯಬೇಕಾಗುತ್ತದೆ. ಡಿ.ಕೆ.ಶಿವಕುಮಾರ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ ಅವರು ಪಕ್ಷ ಯಾವ ಕೆಲಸ ನೀಡುತ್ತದೆ ಅದನ್ನ ಮಾಡುತ್ತೇನೆ ಅಂತ ಹೇಳಿದ್ದಾರೆ. ಆದ್ರೆ ಅವರು ಎಲ್ಲಿಯೂ ಸಿಎಂ ಆಗಬೇಕು ಅಂತ ಮಾತನಾಡಿಲ್ಲ. ಸಿಎಂ ಆಗಬೇಕು ಅನ್ನೋದು ಇಡಿ ಕರ್ನಾಟಕದ ಜನರ ಬಯಕೆ. ಹೈಕಮಾಂಡ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದರು.
ಯತೀಂದ್ರ ಸಿದ್ದರಾಮಯ್ಯ ಅವರು ಈ ರೀತಿ ಹೇಳಿಕೆ ಅವಶ್ಯಕತೆ ಇರಲಿಲ್ಲ. ಇಬ್ಬರು ನಾಯಕರು ಈಗಾಗಲೇ ಈ ಬಗ್ಗೆ ಹೈಕಮಾಂಡ ನಿರ್ಧಾರಕ್ಕೆ ಬದ್ದರಾಗಿರುತ್ತಾರೆ ಅಂತ ಹೇಳಿದ್ದಾರೆ ಎಂದು ಸಿಎಂ ಪುತ್ರ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಎಂಎಲ್ ಸಿ ಚೆನ್ನರಾಜ್ ಹಟ್ಟಿಹೋಳಿ ಹೇಳಿಕೆ ನೀಡಿದರು.




