Belagavi NewsBelgaum NewsKarnataka News

*ಭಕ್ತರ ಜತೆಗೆ ವಿಜಯಪುರದಿಂದ ಬೆಳಗಾವಿಗೆ ಶ್ವಾನ ಪಾದಯಾತ್ರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಸುಕ್ಷೇತ್ರ ಮಾಳಿಂಗೇಶ್ವರ ಜಾತ್ರೆಗೆ ವಿಜಯಪುರದಿಂದ ಪಾದಯಾತ್ರೆ ಮೂಲಕ ಹೂಹಾರವನ್ನ ತಂದು ಜಾತ್ರೆ ಮಾಡುವ ಸಂಪ್ರದಾಯವಿದೆ. ಈ ವೇಳೆ ಶ್ವಾನವೊಂದು ವಿಜಯಪುರದಿಂದ ಶ್ರೀಕ್ಷೇತ್ರ ಮಾಳಿಂಗೇಶ್ವರ ದೇವಸ್ತಾನದವರೆಗೆ ಭಕ್ತರ ಜತೆಗೆ ಹೆಜ್ಜೆಹಾಕಿದೆ. 

ಪ್ರತಿವರ್ಷ ಯುಗಾದಿ ಹಬ್ಬದ ನಿಮಿತ್ತವಾಗಿ ಪೂರ್ವಜರ ಸಂಪ್ರದಾಯದಂತೆ  ಹಿರೇಹೂಳಿ ಗ್ರಾಮದಿಂದ ನೀರು ಹಾಗೂ ವಿಜಯಪುರ ಜಿಲ್ಲೆಯಿಂದ ಹೂಹಾರ ತಂದು ಅದ್ಧೂರಿ ಜಾತ್ರೆ ಮಾಡಲಾಗುತ್ತದೆ‌. ಈ ನಡುವೆ ಶ್ವಾನವೊಂದು ಭಕ್ತರ ಜತೆಗೆ ಅಂದಾಜು 300ಕಿಮೀ ಪ್ರಯಾಣದ ಪಾದಯಾತ್ರೆ ಮಾಡಿದ್ದು ಎಲ್ಲವೂ ದೇವರ ಕೃಪೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಪಾದಯಾತ್ರೆ ಮಾಡೋ ಭಕ್ತರ ಮುಂದೆ ಮುಂದೆ ಶ್ವಾನ ಹೆಜ್ಜೆಹಾಕಿದ್ರೆ ಭಕ್ತರು ಅದರ ಹಿಂದೆ ಹೆಜ್ಜೆ ಹಾಕಿದ್ದಾರೆ.

Home add -Advt

Related Articles

Back to top button