ಅನ್ನದ ಬಜೆ
ಅನ್ನದ ಬಜೆ ಚುಟು ಚಟು ಮಳೆಗೆ ಬಿಸಿ ಬಿಸಿ ಬಜೆ ಟೀ ಜೊತೆ ಚೆನ್ನಾಗಿ ಇರುತ್ತೆ.
ಬೇಕಾದ ಸಾಮಗ್ರಿ:
ಅನ್ನ ಎರಡು ಬೌಲ್, ಈರುಳ್ಳಿ ಎರಡು, ಅಚ್ಚ ಖಾರದಪುಡಿ ಒಂದು ಚಮಚ, ಅಕ್ಕಿಹಿಟ್ಟು , ಅರ್ಧ ಬೌಲ್,ಎರಡು ಚಮಚ ಕಡ್ಲೆಹಿಟ್ಟು, ಹೆಚ್ಚಿದ ಹಸಿಮೆಣಸು ಒಂದು. ಕರಿಯಲು ಎಣ್ಣೆ, ರುಚಿಗೆ ಉಪ್ಪು.
ಮಾಡುವ ವಿಧಾನ:
ಅನ್ನವನ್ನು ಚೆನ್ನಾಗಿ ನಾದಿಕೊಳ್ಳಬೇಕು. ಇದಕ್ಕೆ ಈರುಳ್ಳಿ ಚಿಕ್ಕದಾಗಿ ಹೆಚ್ಚಿ, ಹಸಿಮೆಣಸು, ಖಾರದಪುಡಿ, ರುಚಿಗೆ ಉಪ್ಪು, ಅಕ್ಕಿ ಹಿಟ್ಟು, ಕಡಲೆ ಹಿಟ್ಟನ್ನು ಸೇರಿಸಿ ಚನ್ನಾಗಿ ಕಲಸಬೇಕು. ಈರುಳ್ಳಿ ನೀರು ಬಿಡುವುದರಿಂದ ನೀರು ಬೇಕಿದ್ದರೆ ಮಾತ್ರ ಸೇರಿಸಬೇಕು.ಕಾದ ಎಣ್ಣೆಯಲ್ಲಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಕರಿಯ ಬೇಕು. ಗರಿ ಗರಿ ಬಜೆ ಸವಿಯಲು ತಯಾರಾಗಿದೆ.
ಬಾಳೆ ಹಣ್ಣಿನ ವಡೆ
ಬೆಳಿಗಿನ ಉಪಹಾರ ಹಾಗು ಸಾಯಂಕಾಲ ಟೀ ಜೊತೆಗೆ ಸ್ನ್ಯಾಕ್ಸ್ ಆಗಿ ತಯಾರಿಸಬಹುದಾದ ತಿಂಡಿ ಬಾಳೆಹಣ್ಣಿನ ವಡೆ.
ಬೇಕಾದ ಸಾಮಗ್ರಿಗಳು:
ಬಲಿತ ಬಾಳೆಹಣ್ಣು 4-5 ( ಚಿಕ್ಕದಾದರೆ 7-8) ಅಕ್ಕಿಹಿಟ್ಟು 2 ಕಪ್, ರುಚಿಗೆ ತಕ್ಕಸ್ಟು ಉಪ್ಪು, ಬೆಲ್ಲ ಸ್ವಲ್ಪ ಕರಿಯಲು ಎಣ್ಣೆ.
ಮಾಡುವ ವಿಧಾನ:
ಬಾಳೆಹಣ್ಣನ್ನು ಮಿಕ್ಸಿಗೆಹಾಕಿ ಪೇಸ್ಟ್ ಮಾಡಬೇಕು. ಬಂದರಸಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುದಿಯಲು ಇಡಬೇಕು. ಇದಕ್ಕೆ ಅಕ್ಕಿಹಿಟ್ಟು ಸೇರಿಸಿ ತಿರುವುತ್ತಿರಬೇಕು. ಹಿಟ್ಟು ಬೆಂದಮೇಲೆ ಸ್ವಲ್ಪ ಬೆಲ್ಲ ಹಾಕಿ ಇಳಿಸಬೇಕು. ಆರಿದ ಮೇಲೆ ಹಿಟ್ಟನ್ನು ನಾದಿ ಚಿಕ್ಕ ಚಿಕ್ಕ ಉಂಡೆ ಮಾಡಬೇಕು. ಉಂಡೆಯನ್ನು ಪುರಿ ರೀತಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿಯಬೇಕು. ಬಾಳೆಹಣ್ಣಿನ ವಡೆಜೊತೆಗೆ ಕೊಬ್ಬರಿ ಚಟ್ನಿ ಚೆನ್ನಾಗಿರುತ್ತದೆ.
– ಸಹನಾ ಭಟ್
ಸಹನಾಸ್ ಕಿಚನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ