ಸಂಭಾವ್ಯ ಸಚಿವರ ಪಟ್ಟಿ !

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-  ರಾಜ್ಯ ಸಚಿವ ಸಂಪುಟ ರಚನೆ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಹೈಕಮಾಂಡ್ ತಲೆಕೆಡಿಸಿಕೊಂಡು ಕುಳಿತಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಸಂಭಾವ್ಯ ಸಚಿವರ ಪಟ್ಟಿಯೊಂದು ವೈರಲ್ ಆಗಿದೆ.

ಅಷ್ಟೇ ಅಲ್ಲ ಸಚಿವರಿಗೆ ಖಾತೆಗಳನ್ನೂ ಹಂಚಲಾಗಿದೆ!

Home add -Advt

ವಿಚಿತ್ರವೆಂದರೆ ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಎಂದು ಉಲ್ಲೇಖಿಸಲಾಗಿದೆ!!

ನೀವು ನಂಬಲೇ ಬೇಕು, ಈ ಪಟ್ಟಿಯನ್ನು ಯಾರೋ ಎಷ್ಟು ಕರಾರುವಕ್ಕಾಗಿ ತಯಾರಿಸಿದ್ದಾರೆಂದರೆ ಮುಖ್ಯಮಂತ್ರಿ ಬೊಮ್ಮಾಯಿ ಸಚಿವರಿಗೆ ಖಾತೆ ಹಂಚಿಕೆ ಮಾಡಲು ತಲೆ ಕೆಡಿಸಿಕೊಳ್ಳುವುದೇಬೇಡ. ಈ ಪಟ್ಟಿ ತಯಾರಿಸಿದವರು ತುಂಬಾ ತಲೆ ಕೆಡಿಸಿಕೊಂಡು ಸಚಿವರ ಆಯ್ಕೆ ಮತ್ತು ಖಾತೆ ಹಂಚಿಕೆ ಎರಡನ್ನೂ ಮಾಡಿಬಿಟ್ಟಿದ್ದಾರೆ.

ಆರ್.ಅಶೋಕ, ಅರವಿಂದ ಲಿಂಬಾವಳಿ ಮತ್ತು ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ. ಬಹುತೇಕ ವಲಸಿಗರಿಗೆ ಸಚಿವಸ್ಥಾನ ನೀಡಲಾಗಿದೆ.

ಬೆಳಗಾವಿಯಿಂದ ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ ಮತ್ತು ಪಿ.ರಾಜೀವ ಅವರಿಗೆ ಸ್ಥಾನ ನೀಡಲಾಗಿದೆ. ಜಗದೀಶ ಶೆಟ್ಟರ್, ಈಶ್ವರಪ್ಪ, ಸುರೇಶ ಕುಮಾರ ಮೊದಲಾದ ಹಿರಿಯರನ್ನು ಕೈಬಿಡಲಾಗಿದೆ.

ಅತ್ತ, ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ತಲೆಕೆಡಿಸಿಕೊಂಡು ಓಡಾಡುತ್ತಿದ್ದರೆ, ಇತ್ತ ಇಂತಹ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

ಕ್ಲಬ್ ಹೌಸ್ ನಲ್ಲಿ ಸೆಕ್ಸ್ !

Related Articles

Back to top button