Latest

ತೆಲುಗು ನಟಿ ಮೇಲೆ ಅತ್ಯಾಚಾರ; ಫಿಟ್ನೆಸ್ ತರಬೇತುದಾರನ ಬಂಧನ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಮದುವೆಯಾಗುವ ನೆಪದಲ್ಲಿ ತೆಲುಗು ಸಿನೆಮಾ ನಟಿ ಮೇಲೆ ಅತ್ಯಾಚಾರವೆಸಗಿದ ಫಿಟ್ನೆಸ್ ತರಬೇತುದಾರನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಕೆಲವು ತೆಲುಗು ಸಿನೆಮಾಗಳಲ್ಲಿ ನಟಿಸಿರುವ ಆದಿತ್ಯ ಅಜಯ ಕಪೂರ್ ಬಂಧಿತ. ಈತ ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ 24 ವರ್ಷದ ನಟಿ ಆರೋಪಿಸಿದ್ದಾರೆ.

Home add -Advt

ಆರೋಪಿ ಈ ಹಿಂದೆ ಬಾಂದ್ರಾದಲ್ಲಿರುವ ಸ್ನೇಹಿತನ ಮನೆಯಲ್ಲಿ ನಟಿಯನ್ನು ಸಂಪರ್ಕಿಸಿದ್ದ ಎನ್ನಲಾಗಿದೆ. ನಂತರ ಪರಸ್ಪರ ಮೊಬೈಲ್ ನಂಬರ್ ಗಳನ್ನು ವಿನಿಮಯ ಮಾಡಿಕೊಂಡಿದ್ದು ಇಬ್ಬರೂ ಸ್ನೇಹಿತರಾಗಿದ್ದರು.

ನಂತರದಲ್ಲಿ ನಟಿಯನ್ನು ಮದುವೆಯಾಗುವುದಾಗಿ ನಂಬಿಸಿದ ಆರೋಪಿ ತನ್ನ ಕಫಿ ಪರೇಡ್ ಪ್ರದೇಶದಲ್ಲಿ ಹಾಗೂ ಗೋವಾದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದ.  ಮದುವೆಗೆ ನಿರಾಕರಿಸಿದ ಆತ ತನ್ನ ಮೇಲೆ ದೈಹಿಕ ದೌರ್ಜನ್ಯ ನಡೆಸಲಾರಂಭಿಸಿದ್ದ ನಟಿ ಆರೋಪಿಸಿದ್ದಾರೆ.

ಆರೋಪಿಯನ್ನು ಎನ್. ಎಂ. ಜೋಶಿ ಮಾರ್ಗ್ ಪೊಲೀಸ್ ಠಾಣೆ  ಪೊಲೀಸರು FIR ದಾಖಲಿಸಿಕೊಂಡು ಬಂಧಿಸಿದ್ದು ಪ್ರಕರಣದ ತನಿಖೆಯನ್ನು ಕಫಿ ಪರೇಡ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಶುಕ್ರವಾರ ನೇಗಿನಹಾಳ ಬಸವ ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ

Related Articles

Back to top button