Latest

ಖ್ಯಾತ ಪ್ರವಚನಕಾರ ಡಾ.ಈಶ್ವರ ಮಂಟೂರ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತಮ್ಮ ಪ್ರವಚನದ ಮೂಲಕವೇ ಅಪಾರ ಭಕ್ತರನ್ನು ಸಂಪಾದಿಸಿದ್ದ ಖ್ಯಾತ ಪ್ರವಚನಕಾರ ಡಾ.ಈಶ್ವರ ಮಂಟೂರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಈಶ್ವರ ಮಂಟೂರ ಹುನ್ನೂರಿನ ಬಸವಜ್ಞಾನ ಗುರುಕುಲದ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಬಸವಾದಿ ಶರಣರ ಚಿಂತನೆಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಚುರ ಪಡಿಸುತ್ತಿದ್ದರು.

ಪರಿಚಯ :

ಡಾ. ಈಶ್ವರ ಮಂಟೂರ ಅವರು ಕವಿಯಾಗಿ, ಚಿಂತಕರಾಗಿ, ಅನುಭಾವಿ ಪ್ರವಚನಕಾರರಾಗಿ, ಸಾಹಿತಿಗಳಾಗಿ, ಸಮಾಜೋದ್ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಮುನ್ನಡೆದಿದ್ದಾರೆ. ಕಲ್ಲು ಮನಸ್ಸಿನ ಹೃದಯಗಳನ್ನು ಹೂವಿನಂತೆ ಅರಳಿಸುವ ಕ್ರೂರಿಗಳ ಭಾವದಲ್ಲಿ ದಯೆಯನ್ನು ತುಂಬುವ, ದ್ವೇಷಿಗಳ ಮನದಲ್ಲಿ ಪ್ರೀತಿಯ ಹಣತೆಯನ್ನು ಹಚ್ಚುವ, ವಿನಯಗುಣ ಸರಳ ಸಂಪನ್ನ ಶರಣರಾದ ಇವರ ತ್ಯಾಗ, ಸೇವೆ ಅನುಪಮವಾದುದು.

Home add -Advt

ಶರಣಶ್ರೀ ಡಾ. ಈಶ್ವರ ಮಂಟೂರ ಅವರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರಿನ ‘ಕಲಾನೇಕಾರ’ ಕುಟುಂಬದಲ್ಲಿ 23-03 1972 ರಂದು ಜನಿಸಿದ್ದರು. ತಂದೆ ಶ್ರೀಶೈಲಪ್ಪ, ತಾಯಿ ಅನ್ನಪೂರ್ಣ ಬಾಲ್ಯದಲ್ಲಿಯೇ ಶಿಕ್ಷಣದೊಂದಿಗೆ ಸಂಗೀತ, ಸಾಹಿತ್ಯ, ಭಜನೆ, ಪುರಾಣ, ಪ್ರವಚನ ಮುಂತಾದ ಕಲೆಗಳನ್ನು ಮೈಗಂಟಿಸಿಕೊಂಡು ಬೆಳೆದವರು ತಿಳಿಯಲಾರದ ಘನವನ್ನು ತಿಳಿಯುವ ಕಾಣಬಾರದ ಪರವಸ್ತುಗಳನ್ನು ಕಾಣುವ ಅಂತರಂಗದ ರತ್ನವಾದ ಆತ್ಮವಿದ್ಯೆಯ ಕಡೆಗೆ ಒಲವು ತೋರಿದವರು.

1993 ರಲ್ಲಿ ಬಿ.ಕಾಂ. ಪದವಿ ಪಡೆದು, ಅಣ್ಣಾಗೃಹಪಾಠ ಶಿಕ್ಷಣ ಕೇಂದ್ರ ಆರಂಭಿಸಿ ಐದು ವರ್ಷಗಳ ಕಾಲ ಜ್ಞಾನಚಿಂತನದಡಿಯಲ್ಲಿ ಆಧ್ಯಾತ್ಮಿಕ ತಳಹದಿಯ ಮೇಲೆ ಸಹಸ್ರಾರು ಮಕ್ಕಳಿಗೆ ಜ್ಞಾನದಾಸೋಹ ನೀಡುತ್ತಲೇ ಬ್ಯಾಂಕಿನಲ್ಲಿ ಕರಣಿಕರಾಗಿ ಸೇವೆ ಸಲ್ಲಿಸಿದವರು. ಬಸವಾದಿ ಶಿವಶರಣರ ತತ್ವ ಸಿದ್ಧಾಂತಗಳನ್ನು ಅಪ್ಪಿಕೊಂಡ ಶರಣರು ಪವಚನಗಳ ಮೂಲಕ ನಾಡಿನ ಜನಮನದಲ್ಲಿ ಬಸವತತ್ವವನ್ನು ಬಿತ್ತರಿಸುವ ಸಂಕಲ್ಪ ತೊಟ್ಟ ಇವರು ಬ್ಯಾಂಕ್ ಹುದ್ದೆಗೆ ರಾಜೀನಾಮೆ ನೀಡಿ, ಶರಣ ಪಥದಲ್ಲಿ ಹೆಜ್ಜೆಯಿರಿಸಿದವರು. ದೇಶೀ ಕಲೆಗಳನ್ನು ಉಳಿಸಿ ಬೆಳೆಸಲು ‘ರಾಗರಶ್ಮಿ’ ಎಂಬ ಹತ್ತು ಕಲಾವಿದರ ಜಾನಪದ ಬಳಗ ಕಟ್ಟಿಕೊಂಡು ಹಳ್ಳಿ ಹಳ್ಳಿಗೆ ಸಂಚರಿಸಿ, ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು. ಸಮಾಜದ ಏಳೆಗಾಗಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾದ ಗಡಿಭಾಗದಲ್ಲೆಲ್ಲಾ ಸಂತಶರಣರಂತೆ ಸಂಚರಿಸಿ, ಬಹರೇನ್, ದುಬೈ ರಾಷ್ಟ್ರಗಳಲ್ಲೂ ಶರಣ ಸಂಸ್ಕೃತಿಯ ಪ್ರಚಾರ-ಪ್ರಸಾರ, ವಚನ ಪ್ರವಚನ ಮಾಡಿದ ಕೀರ್ತಿ ಈ ಶರಣರಿಗೆ ಸಲ್ಲುತ್ತದೆ.
ಶಾಲಾ-ಕಾಲೇಜು ಬಂದ್ ಬಗ್ಗೆ ಶಿಕ್ಷಣ ಸಚಿವರ ಸ್ಪಷ್ಟನೆ

Related Articles

Back to top button