Belagavi NewsBelgaum News

*ಹಿರಿಯ ವರದಿಗಾರ ಮಲ್ಲಿಕಾರ್ಜುನರಡ್ಡಿಗೆ ಡಾ. ಸೋಮಶೇಖರ ದತ್ತಿನಿಧಿ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ನೀಡುವ ಹಿರಿಯ ಐ.ಎ.ಎಸ್ ಅಧಿಕಾರಿ ಡಾ. ಸೋಮಶೇಖರ ದತ್ತಿನಿಧಿ (2024-25) ಪ್ರಶಸ್ತಿ ಬೆಳಗಾವಿ ಜಿಲ್ಲೆ ರಾಮದುರ್ಗದ ಹಿರಿಯ ವರದಿಗಾರ ಮಲ್ಲಿಕಾರ್ಜುನರಡ್ಡಿ ಗೊಂದಿ ಅವರಿಗೆ ಲಭಿಸಿದೆ. 

ಕಳೆದ 25 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು 2019 ರಲ್ಲಿ ಸಂಭವಿಸಿದ ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಪ್ರವಾಹ ಸ್ಥಿತಿಗತಿ ಕುರಿತು 2024 ರಲ್ಲಿ ಪ್ರವಾಹ ಸಂತ್ರಸ್ತರ ಗೋಳು ಸರಣಿ ವರದಿ ಮಾಡಿ ಸರಕಾರದ ಗಮನ ಸೆಳೆದದ್ದು,  ಸರಣಿ ವರದಿ ಪರಿಗಣಿಸಿ ಈ ಭಾರಿ ದತ್ತಿನಿಧಿ ಪ್ರಶಸ್ತಿ ಲಭಿಸಿದೆ.  2020 ರಲ್ಲಿ ಕೆ.ಯು.ಡಬ್ಲೂ.ಜೆ ವತಿಯಿಂದ ಉತ್ತಮ ಕೃಷಿ ವರದಿಗೆ ಯಜಮಾನ ಟಿ.ನಾರಾಯಣಪ್ಪ ಪ್ರಶಸ್ತಿ ಕೂಡಾ ಇವರಿಗೆ ಲಭಿಸಿತ್ತು.  

Home add -Advt

ಕಾಸರಗೋಡಿನಲ್ಲಿ ಮೇ. 3 ರಂದು ದತ್ತಿನಿಧಿ ಪ್ರಶಸ್ತಿ ಪ್ರಧಾನ ಸಮಾರಂಭ  ನಡೆಯಲಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೃಷಿ ಸಚಿವ ಚೆಲುವರಾಯಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ, ಕರ್ನಾಟಕ ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ಪ್ರಭಾಕರ್, ಕೆ.ಯು.ಡಬ್ಲೂ.ಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Related Articles

Back to top button