Belagavi NewsBelgaum NewsKannada NewsKarnataka NewsLatest

*ಕೃಷಿ ಹೊಂಡದಲ್ಲಿ ಬಿದ್ದು ರೈತ ಸಾವು*

ಪ್ರಗತಿವಾಹಿನಿ ಸುದ್ದಿ: ಖಾನಾಪುರ: ತಮ್ಮದೇ ಜಮೀನಿನ ಕೃಷಿ ಹೊಂಡದ ಬಳಿ ಬೆಳೆದಿದ್ದ ಕಳೆ ತೆಗೆಯುತ್ತಿದ್ದ ರೈತರೊಬ್ಬರು ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ.

Home add -Advt

ಇಲ್ಲಿನ ಕಕ್ಕೇರಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕಕ್ಕೇರಿ ಗ್ರಾಮದ ನಿವಾಸಿ ಮಲ್ಲಯ್ಯ ದುಂಡಯ್ಯ ಹಿರೇಮಠ (52) ಮೃತ ರೈತ. ಮಲ್ಲಯ್ಯ ತಮ್ಮ ಹೊಲದ ಕೃಷಿ ಹೊಂಡದ ಸುತ್ತಮುತ್ತ ಕಳೆ ತೆಗೆಯುವಾಗ ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದಾರೆ.

ಅವರಿಗೆ ಈಜಲು ಬಾರದ್ದರಿಂದ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button