Kannada NewsKarnataka News

ಮನೆ ಬಾಗಿಲಿಗೆ ಪಡಿತರ ಯೋಜನೆ ಸಾಕಾರಗೊಳಿಸಿದ ಡಾ.ಸೋನಾಲಿ ಸರ್ನೋಬತ್

https://studio.youtube.com/video/hL5V2H7jMWU/edit

 

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಅಬ್ನಾಲಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಮನೆಬಾಗಿಲಲ್ಲಿ ಪಡಿತರ ವಿತರಣೆ ವ್ಯವಸ್ಥೆ ಆರಂಭವಾಗಿದೆ.

ಸಾಮಾಜಿಕ ಕಾರ್ಯಕರ್ತೆ, ಬಿಜೆಪಿ ಖಾನಾಪುರ ತಾಲೂಕು ಉಸ್ತುವಾರಿ ಡಾ.ಸೋನಾಲಿ ಸರ್ನೋಬತ್ ಅವರ ಪ್ರಯತ್ನದಿಂದಾಗಿ ಈ ವ್ಯವಸ್ಥೆ ಸಾಧ್ಯವಾಗಿದೆ.

ಗ್ರಾಮಸ್ಥರಿಗೆ ಪಡಿತರ ವಿತರಣೆಗಾಗಿ ಅಬ್ನಾಲಿ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತ್ ಸದಸ್ಯ ಮಹದೇವ್ ಶಿವುಲ್ಕರ್  ಪದೇ ಪದೇ  ಡಾ. ಸೋನಾಲಿ ಸರ್ನೋಬತ್  ಅವರ ಬಳಿ ಮನವಿ ಮಾಡಿದ್ದರು.
ಈ ಗ್ರಾಮಸ್ಥರು ಪಡಿತರಕ್ಕಾಗಿ 7 ಕಿಮೀ ದೂರದ ಶಿರೋಳಿ ಗ್ರಾಮಕ್ಕೆ ಬರಬೇಕಿತ್ತು. ಸಚಿವ ಉಮೇಶ ಕತ್ತಿ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಕೊನೆಗೂ ಯೋಜನೆ ಸಾಕಾರಗೊಂಡಿತು.
ಮಹಾದೇವ ಶಿವುಳಕರ, ಬುದ್ಧಪ್ಪ ಗಾಂವಕರ (ಗ್ರಾಮದ ಪಂ.), ನಾಮದೇವ್ ಗಾಂವ್ಕರ್, ನಾರಾಯಣ ಗಾಂವ್ಕರ್, ದತ್ತು ಗಾಂವ್ಕರ್, ಬಿಜೆಪಿ ಕಾರ್ಯಕರ್ತ ಬಸವರಾಜ ಕಡೇಮನಿ, ಬಿಜೆಪಿ ಕಾರ್ಯಕರ್ತ ಈಶ್ವರ ಸಾಣಿಕೋಪ್, ಬಾಳೇಶ ಚವ್ವಾಣವರ, ಕುಶಾಲ ಅಂಬೋಜಿ, ಮಂಜುನಾಥ ನಲವಾಡೆ, ರಾಜಕಾರ್, ಶಜಕವಾಡ, ಮಹೇಶ. ಕೇಂದ್ರ ಪ್ರಮುಖ್ ವಿಠ್ಠಲ್ ನಿಡಗಲ್ಕರ್, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಉಪಸ್ಥಿತರಿದ್ದರು.

ಸಾರ್ವಜನಿಕ ಅಹವಾಲು ಆಲಿಕೆಗೆ ಕಚೇರಿ

ಡಾ.ಸೋನಾಲಿ ಸರ್ನೋಬತ್ ಅವರು  ತಮ್ಮ ನಿಯತಿ ಫೌಂಡೇಶನ್‌ನಿಂದ ಖಾನಾಪುರದಲ್ಲಿ ಸಾರ್ವಜನಿಕ ಕುಂದುಕೊರತೆ ಆಲಿಕೆಗಾಗಿ ಕಚೇರಿಯನ್ನು ಸ್ಥಾಪಿಸಿದ್ದಾರೆ. ನಿಯತಿ ಫೌಂಡೇಶನ್ ಮೂಲಕ ಜನರ ಪರ ಕೆಲಸ ಮಾಡಲಾಗುವುದು. ಬಿಜೆಪಿ ಸರ್ಕಾರ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಮುಂಬರುವ ವರ್ಷಗಳಲ್ಲಿ ಮನೆ ಬಾಗಿಲಿಗೆ ಪಡಿತರವನ್ನು ವಿತರಿಸುವ ಪ್ರಬಲ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ.  ಪ್ರಧಾನಿ ಮೋದಿಯವರ ರಾಮರಾಜ್ಯದ ಕನಸನ್ನು ಸಾಕಾರಗೊಳಿಸಲು  ಸಚಿವರು ಸಾಮಾನ್ಯ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸೋನಾಲಿ ಈ ಸಂದ್ರಭದಲ್ಲಿ ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕ ವಿಜಯ ಪಾಟೀಲ ವಂದಿಸಿದರು.

 

ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ ಸೋನಾಲಿ ಸರ್ನೋಬತ್: ತಾವೇ ನಿಂತು ರೇಶನ್ ಹಂಚಿದ ಡಾಕ್ಟರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button