ಕೊರೊನಾ ನಿವಾರಣೆಯ ಉಪಾಯಗಳು ಗಂಟಲಿಗೆ ಕಂಠಕ
ಶಾಮ್ ಹಂದೆ, ಮುಂಬಯಿ – ಕೊರೊನಾ ವೈರಸ್ ರಕ್ಷಣೆಗಾಗಿ ಸ್ವಯಂಪ್ರೇರಿತವಾಗಿ ವಿವಿಧ ಕಷಾಯಗಳ ಪ್ರಯೋಗ ಮತ್ತು ಸತತವಾಗಿ ಬಿಸಿನೀರಿನ ಬಳಕೆಯಿಂದ ಗಂಟಲೊಳಗಿನ ತ್ವಚೆ ಸುಡುವುದರಿಂದ ಅಲ್ಸರ್, ಗಂಟಲು ಉರಿ ಮತ್ತು ವೇದನೆಗಳಂತಹ ಸಮಸ್ಯೆಗಳನ್ನು ಅನೇಕರು ಅನುಭವಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಸ್ವಯಂಘೋಷಿತ ವೈದ್ಯರ ಸಲಹೆ- ಫೆಬ್ರವರಿ-ಮಾರ್ಚ್ ತಿಂಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕೊರೊನಾ ಸೋಂಕು ತಡೆಗಟ್ಟುವ ಕ್ರಮಗಳ ಬಗ್ಗೆ ಸಲಹೆಗಳ ಮಹಾಪೂರವೇ ಹರಿದು ಬಂದಿತ್ತು. ಕೊರೊನಾ ವೈರಸ್ ಮೂಗು ಮತ್ತು ಗಂಟಲಿನಲ್ಲಿ ಸ್ವಲ್ಪ ಸಮಯದವರೆಗೆ ಇರುತ್ತವೆ. ಬಿಸಿನೀರು ಕುಡಿಯುವುದರಿಂದ ಅಥವಾ ಬಿಸಿ ಹಬೆಯ ಸೇವನೆಯ ಮೂಲಕ ಅವು ನಾಶವಾಗುತ್ತವೆ ಎಂಬ ಪ್ರಚಾರ ಪ್ರಾರಂಭವಾಯಿತು. ಮುಂದಿನ ಹಂತದಲ್ಲಿ, ವಿವಿಧ ರೀತಿಯ ಕಷಾಯಗಳ ಜಾಹೀರಾತುಗಳ ಅಲೆ ಉಕ್ಕಿ ಹರಿಯಲಾರಂಭಿಸಿದವು. ಇದೆಲ್ಲ ಕಡಿಮೆಯೋ ಎಂಬಂತೆ, ಉಷ್ಣ ವಾತಾವರಣದಲ್ಲಿ ವೈರಸ್ ಬದುಕುಳಿಯುವುದಿಲ್ಲ ಎಂಬುದು ಒಂದು ಸಂಶೋಧನಾ ಅಧ್ಯಯನದಲ್ಲಿ ಪ್ರಕಟವಾಯಿತು. ಪರಿಣಾಮ ಅನೇಕರು ದಿನವಿಡೀ ಬಿಸಿನೀರು ಮತ್ತು ಕಷಾಯ ಕುಡಿಯುವುದನ್ನು ಮುಂದುವರೆಸಿದರು. ಅದರ ಅಡ್ಡಪರಿಣಾಮಗಳು ಈಗ ಗೋಚರಿಸುತ್ತಿವೆ.
ಬೇಡದ ಭಯ
ಅತಿ ಬಿಸಿನೀರು ಮತ್ತು ಕಷಾಯಗಳ ಸೇವನೆ ಗಂಟಲು ನೋವು, ಗಂಟಲು ಉರಿ, ಆಹಾರ ನುಂಗಲು ತೊಂದರೆಯಂತಹ ಸಮಸ್ಯೆಗಳಿಗೆ ಆಮಂತ್ರಣ ನೀಡುತ್ತದೆ. ಅದರಲ್ಲೇ ಸಾಧಾರಣವಾಗಿ ಕೊರೊನಾ ಸೊಂಕಿನ ಲಕ್ಷಣಗಳು ಇಂತಹದೇ ಆಗಿರುವುದೆಂಬ ಭ್ರಮೆಯಲ್ಲಿ ‘ನನಗೂ ಕೊರೊನಾ ಆಗಿರಬಹುದೇ?’ ಎಂಬ ಭಯ ಆವರಿಸಿ ಹಾಗೂ ಮಾನಸಿಕ ಒತ್ತಡವೂ ಸೇರಿಕೊಂಡು ಅನೇಕ ಜನರನ್ನು ಈಗಲೂ ಕಾಡುತ್ತಿದೆ. ಗಂಟಲಿನ ಅಲ್ಸರ್ ಪ್ರಮಾಣ ಕೂಡ ಹೆಚ್ಚುತ್ತಿದೆ.
ಕೆಲವರಿಗೆ ಜ್ವರವಿಲ್ಲ, ಆದರೆ ದೀರ್ಘಕಾಲದ ಗಂಟಲು ನೋವಿನಿಂದಾಗಿ ನನಗೆ ಕ್ಯಾನ್ಸರ್ ಆಗಿರಬಹುದೇ? ಎಂಬ ಭಯದಿಂದ ಕಂಗಾಲಾಗಿದ್ದಾರೆ.
ಕೆಲವರಿಗೆ ಜ್ವರವಿಲ್ಲ, ಆದರೆ ದೀರ್ಘಕಾಲದ ಗಂಟಲು ನೋವಿನಿಂದಾಗಿ ನನಗೆ ಕ್ಯಾನ್ಸರ್ ಆಗಿರಬಹುದೇ? ಎಂಬ ಭಯದಿಂದ ಕಂಗಾಲಾಗಿದ್ದಾರೆ.
ಗಂಟಲಿನ ಮೇಲೆ ಅತ್ಯಾಚಾರ-
ಕೊರೊನಾ ಇಲ್ಲದಿದ್ದರೂ ಗಂಟಲಿನ ಮೇಲೆ ಅತ್ಯಾಚಾರ ಮಾಡಲಾದ್ದರಿಂದ ಗಂಟಲು ನೋವಿನ ಸಮಸ್ಯೆಗಳೊಂದಿಗೆ ಶೇ.10 ರಿಂದ 15 ರಷ್ಟು ರೋಗಿಗಳು ನಿತ್ಯ ತಪಾಸಣೆಗಾಗಿ ಬರುತ್ತಾರೆ ಎಂದು ಕಿವಿ, ಮೂಗು ಮತ್ತು ಗಂಟಲು ತಜ್ಞರಾದ ಡಾ. ಆಶೇಶ್ ಭೂಮ್ಕರ್ ತಿಳಿಸಿದ್ದಾರೆ.
ಗಂಟಲು ಕೆರೆತವಿದ್ದಲ್ಲಿ ಉಗುರು ಬೆಚ್ಚಗಿನ ನೀರಿನಿಂದ ಗಂಟಲು ಮತ್ತು ಬಾಯಿಯನ್ನು ಮುಕ್ಕಳಿಸುವ ಸಲಹೆ ನೀಡುತ್ತೇವೆ. ಇದರಿಂದ ಆ ಭಾಗದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಆದರೆ ಕೊರೊನಾದ ಭಯದಿಂದ ಜನರು ನಿರಂತರವಾಗಿ ಅತಿಯಾದ ಬಿಸಿನೀರನ್ನು ಸೇವಿಸಿದ ಪರಿಣಾಮ ಕೆಲವು ರೋಗಿಗಳಲ್ಲಿ ಗಂಟಲಿನ ಚರ್ಮ ಸುಟ್ಟಿರುವುದು ಕಂಡುಬಂದಿದೆ. ಮುಂದಿನ ಕೆಲವು ದಿನಗಳವರೆಗೆ ಇದನ್ನು ನಿಲ್ಲಿಸುವಂತೆ ಸೂಚಿಸುತ್ತೇವೆ. ಕ್ರಮೇಣ, ಗಾಯ ವಾಸಿಯಾಗಿ ಗಂಟಲು ನೋವು ನಿಂತಿದೆ ಎಂದು ಕೂಪರ್ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಡಾ.ಶಶಿಕಾಂತ್ ಮಾಶ್ಹಾಳ ತಿಳಿಸಿದ್ದಾರೆ.

ಆಗಿದ್ದೇನು?
ಸಾಮಾಜಿಕ ಮಾಧ್ಯಮಗಳಲ್ಲಿ ಕೊರೊನಾ ಸೋಂಕು ತಡೆಗಟ್ಟುವ ವಿಡಿಯೋಗಳ ಅಂಧಾನುಕರಣದಿಂದ ಬಿಸಿನೀರಿನ ಹಬೆ, ಬಿಸಿ ನೀರಿನ ಥರ್ಮಸ್ ಜೊತೆಯಲ್ಲಿರಿಸುವಂತಹ ಅನೇಕ ಉಪಾಯಗಳನ್ನು ಕಂಡು ಹಿಡಿಯಲಾಯಿತು. ವಿವಿಧ ಕಷಾಯಗಳ ಸೇವನೆ ಮತ್ತು ಬಿಸಿನೀರಿನ ಹಬೆಯಿಂದ ಕೊರೊನಾ ವೈರಸ್ ಕೊಲ್ಲಲ್ಪಡುತ್ತವೆ ಎಂದು ಹಲವರಿಗೆ ನಂಬಿಕೆಯಾಗಿ, ಶರೀರದ ಮೇಲೆ ಮಾಡಲಾದ ಪ್ರಯೋಗಗಳಿಂದ ಗಂಟಲಿನ ಹೊಸ ಕಾಯಿಲೆಗಳು ಸೃಷ್ಟಿಯಾದವು.
ತಪ್ಪುಗ್ರಹಿಕೆಗಳಿಗೆ ಬಲಿಯಾಗಿದ್ದೀರಿ-
ವೈರಸ್ ಶರೀರ ಪ್ರವೇಶಿಸಿದ ನಂತರ, ಅದು ಗಂಟಲಿನಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ತಕ್ಷಣ ಅದು ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ಆದ್ದರಿಂದ, ಕಷಾಯ, ಬಿಸಿನೀರಿನ ಹಬೆ ತೆಗೆದುಕೊಳ್ಳುವುದರಿಂದ ವೈರಸ್ ತಡೆಗಟ್ಟಲು ಸಾಧ್ಯ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದ್ದರಿಂದ ಈ ತಪ್ಪುಗ್ರಹಿಕೆಗಳಿಗೆ ಬಲಿಯಾಗದಿರಿ ಎಂದು ಡಾ ಭೂಮ್ಕರ್ ಸಲಹೆ ನೀಡಿದ್ದಾರೆ .
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ