Latest

ರಸ್ತೆಯಲ್ಲೇ ಬೆಂಕಿ ಹೊತ್ತಿ ಉರಿಯುತ್ತಿದೆ ಮಹಿಳೆಯ ದೇಹ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮಹಿಳೆಯೊಬ್ಬರ ದೇಹ ಹೊತ್ತಿ ಉರಿಯುತ್ತಿರುವ ಸ್ಥಿತಿಯಲ್ಲಿ ರಸ್ತೆ ಪಕ್ಕದಲ್ಲೇ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಕಲ್ಲೂರು -ಹೊಸಕೋಟೆ ರಸ್ತೆಯ ಬದಿಯಲ್ಲಿ ಮಹಿಳೆಯ ದೇಹಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹೋಗಿದ್ದಾರೆ. ಉರಿಯುತ್ತಿರುವ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿರುವ ಪಿರಿಯಾಪಟ್ಟಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೊರಗಡೆಯೆಲ್ಲಿಯೋ ಮಹಿಳೆಯನ್ನು ಕೊಂದು ಬಳಿಕ ಇಲ್ಲಿಗೆ ಶವತಂದು ಬೆಂಕಿಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೋ ಅಥವಾ ಸ್ಥಳದಲ್ಲೇ ಬೆಂಕಿ ಹಚ್ಚಿ ಸಾಯಿಸಿದ್ದಾರೋ ಪತ್ತೆಯಾಗಬೇಕಿದೆ.

Related Articles

Back to top button