Latest

ತಾನೇ ಚಾಲನೆ ಮಾಡುತ್ತಿದ್ದ ಲಾರಿ ಗುದ್ದಿ ಮೃತಪಟ್ಟ ಚಾಲಕ !

ಕೊಯಂಬತ್ತೂರು – ತಾನೇ ಚಾಲನೆ ಮಾಡುತ್ತಿದ್ದ ಲಾರಿ ಗುದ್ದಿ ಚಾಲಕನೊಬ್ಬ ಮೃತಪಟ್ಟ ವಿಚಿತ್ರ ವಿದ್ಯಮಾನ ತಮಿಳುನಾಡಿನ ಕೋಯಂಬತ್ತೂರಿನಲ್ಲಿ ನಡೆದಿದೆ.

ಲಾರಿ ಚಾಲಕ ಸುರೇಶ (೫೦ ) ಮೃತಪಟ್ಟವರು. ಕೋಯಂಬತ್ತೂರಿನ ಕಡುವಟ್ಟಿಪಾಳ್ಯಂನಲ್ಲಿ ಪೆಟ್ರೋಲ್ ಬಂಕ್ ಒಂದರ ಬಳಿ ಚಾಲಕ ಸುರೇಶ ಲಾರಿ ನಿಲ್ಲಿಸಿ ಲಾರಿಯ ಹಿಂಭಾಗದಲ್ಲಿ ಮೂತ್ರ ವಿಸರ್ಜನೆಗೆ ನಿಂತಿದ್ದರು. ಈ ವೇಳೆ ಲಾರಿ ಒಮ್ಮೆಲೇ ಹಿಮ್ಮುಖವಾಗಿ ಚಲಿಸಿದ್ದು ಸುರೇಶ ಲಾರಿಯ ಹಿಂದಿನ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾರೆ.

Home add -Advt

ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಚಾಲಕರೊಬ್ಬರು ಸುರೇಶ ಹಿಂಬದಿಯ ಚಕ್ರದಡಿ ಸಿಲುಕಿ ಮೃತಪಟ್ಟಿದ್ದನ್ನು ಗಮನಿಸಿ ಸ್ಥಳೀಯರಿಗೆ ತಿಳಿಸಿದ್ದಾರೆ. ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಂದು ಪರೀಕ್ಷಿಸಿದರೂ ಸುರೇಶ ತಮ್ಮದೇ ಲಾರಿಯಡಿ ಹೇಗೆ ಸಿಲುಕಿದ ಎಂಬುದು ಗೊತ್ತಾಗೊರಲಿಲ್ಲ. ತನಿಖೆ ನಡೆಸಿದಾಗ ಪೆಟ್ರೋಲ್ ಬಂಕ್‌ನ ಸಿಸಿಟಿವಿ ವೀಕ್ಷಿಸಿದ ಬಳಿಕ ಅವಘಡ ನಡೆದದ್ದು ಹೇಗೆ ಎಂಬುದು ಪತ್ತೆಯಾಗಿದೆ. ಲಾರಿಯಿಂದ ಇಳಿದು ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ಸುರೇಶ ಲಾರಿಯ ಹ್ಯಾಂಡ್ ಬ್ರೇಕ್ ಹಾಕದಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯರಾತ್ರಿ ಮುಂಬೈ ವಿಮಾನ ನಿಲ್ದಾಣದ ಗೋಡೆ ಹಾರಿದ ಯುವಕ

Related Articles

Back to top button