
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಇದೀಗ ಮಾಜಿ ಭೂಗತದೊರೆ ಮುತ್ತಪ್ಪ ರೈ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಡ್ರಗ್ಸ್ ಪ್ರಕರಣದ ಬಂಧಿತ ಆರೋಪಿಗಳ ಜೊತೆ ಮುತ್ತಪ್ಪ ರೈ ಪುರ ರಿಕ್ಕಿ ರೈಗೆ ನಂಟಿದೆ ಹಾಗೂ ಪ್ರಕರಣದ ಆರೋಪಿ ಆದಿತ್ಯ ಆಳ್ವ ತಲೆಮರೆಸಿಕೊಳ್ಳಲು ರಿಕ್ಕಿ ಸಹಾಯಮಾಡಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ದಿ.ಮುತ್ತಪ್ಪ ರೈ ಅವರ ಬಿಡದಿ ನಿವಾಸ ಹಾಗೂ ಸದಾಶಿವ ನಗರದಲ್ಲಿರುವ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ಈ ದಾಳಿ ನಡೆಸಿದ್ದು, ಸದಾಶಿವನಗರದಲ್ಲಿನ ನಿವಾಸದಲ್ಲಿ ರಿಕ್ಕಿ ರೈ ಅವರ ನಿವಾಸ ಹಾಗೂ ಮೂರು ಕಾರುಗಳನ್ನು ಪರಿಶೀಲಿಸಿದ್ದಾರೆ.