Latest

ಶಾಲಾ ಮಕ್ಕಳನ್ನು ಸೆಳೆಯಲು ಐಸ್ ಕ್ರೀಂ ಗೆ ಡ್ರಗ್ಸ್?

ಪ್ರಗತಿವಾಹಿನಿ ಸುದ್ದಿ; ಮೈಸೂರು: ಶ್ರೀಮಂತರ ಮಕ್ಕಳನ್ನು ಸೆಳೆಯುವ ಉದ್ದೇಶಕ್ಕಾಗಿ ಪ್ರತಿಷ್ಠಿತ ಶಾಲಾ ಮಕ್ಕಳಿಗೆ ಐಸ್ ಕ್ರೀಂ ಹಾಗೂ ಚಾಕೋಲೇಟ್ ಗಳಲ್ಲಿ ಡ್ರಗ್ಸ್ ಸವರಿ ನೀಡಲಾಗುತ್ತಿದೆ ಎಂಬ ಸುದ್ದಿ ಕೂಡ ಇದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಅವರು, ಡ್ರಗ್ಸ್ ದಂಧೆಕೋರರು ಶಾಲಾ ಮಕ್ಕಳನ್ನು ಸೆಳೆಯುವ ಉದ್ದೇಶಕ್ಕಾಗಿ ಐಶ್ ಕ್ರೀಂ, ಚಾಕೋಲೇಟ್, ಹಣ್ಣುಗಳಿಗೂ ಡ್ರಗ್ಸ್ ಸವರಿ ನೀಡುತ್ತಿರುವ ಸಾಧ್ಯಗಳಿವೆ. ಮಕ್ಕಳನ್ನು, ಯುವ ಪೀಳಿಗೆಯನ್ನು ಈ ಪಿಡುಗಿನಿಂದ ರಕ್ಷಿಸಬೇಕಿದೆ ಎಂದರು.

ಡ್ರಗ್ಸ್ ಮಾಫಿಯಾ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇನ್ನು ಚಿತ್ರರಂಗದಲ್ಲಿ ಡ್ರಗ್ಸ್ ನಂಟು ಕುರಿತು ನಟಿ ರಾಗಿಣಿಯವನ್ನು ಈಗಾಗಲೇ ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

Related Articles

Back to top button