Latest

ಡಿವೈಎಸ್ ಪಿ ಲಕ್ಷ್ಮಿ ಸಾವಿಗೆ ಆಕೆಯ ಪತಿಯೇ ಕಾರಣ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಐಡಿ ಡಿವೈ ಎಸ್ ಪಿ ಲಕ್ಷ್ಮೀ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಲಕ್ಷ್ಮೀ ಆತ್ಮಹತ್ಯೆಗೆ ಆಕೆಯ ಗಂಡನೇ ಕಾರಣ. ಆತನೇ ಆಕೆ ಪ್ರಾಣ ಕಿತ್ತುಕೊಂಡಿದ್ದಾನೆ ಎಂದು ಡಿವೈಎಸ್ ಪಿ ಲಕ್ಷ್ಮೀ ಸೋದರತ್ತೆ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್ ಪಿ ಲಕ್ಷ್ಮೀ ಸೋದರತ್ತೆ ಲಕ್ಷ್ಮೀ, ಆಕೆ ಮದುವೆಯಾದಾಗಿನಿಂದಲೂ ಒಂದು ದಿನ ನೆಮ್ಮದಿಯಿಂದ ಇರಲಿಲ್ಲ. ಆಕೆಯ ಗಂಡ ತೊಂದರೆ ನೀಡುತ್ತಿದ್ದ. ಲಕ್ಷ್ಮೀ ಸಾವಿಗೆ ಆಕೆಯ ಪತಿಯೇ ಕಾರಣ. ಅವನೊಬ್ಬ ಕಳ್ಳ. ಅವನ ಕಿರುಕುಳದಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಅಳಲು ತೋಡಿಕೊಂಡಿದ್ದಾರೆ.

Home add -Advt

ಈ ನಡುವೆ ಡಿವೈಎಸ್ ಪಿ ಲಕ್ಷ್ಮೀ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಕುಟುಂಬಸ್ಥರಿಗೆ ಮೃತ ದೇಹ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಡಿವೈಎಸ್ ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣ; ನಾಲ್ವರು ಪೊಲೀಸರ ವಶಕ್ಕೆ

Related Articles

Back to top button