Kannada NewsKarnataka NewsNational

*ಮ್ಯಾನ್ಮಾರ್‌ನಲ್ಲಿ ಭೂಕಂಪ: 700ಕ್ಕೂ ಅಧಿಕ ಜನರ ಸಾವು*

ಪ್ರಗತಿವಾಹಿನಿ ಸುದ್ದಿ: ಮ್ಯಾನ್ಮಾರ್‌ನಲ್ಲಿ ಸಂಭವಿಸಿರುವ ಭ್ರಬಲ ಭೂಕಂಪದಲ್ಲಿ  700ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, ನೂರಾರು ಮಂದಿ ಅವಶೇಷಗಳಡಿ ಸಿಲುಕಿ ನಾಪತ್ತೆಯಾಗಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 7.7 ಹಾಗೂ 6.4 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವನ್ನು ಮೋನಿವಾ ನಗರದಿಂದ ಸುಮಾರು 50 ಕಿ.ಮೀ.ಪೂರ್ವಕ್ಕೆ ಮಧ್ಯ ಮ್ಯಾನ್ಮಾರ್‌ನಲ್ಲಿ ಎಂದು ಗುರುತಿಸಲಾಗಿದೆ.

ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಭಲ ಭೂಕಂಪದಿಂದಾಗಿ ಬೆರೆಯ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲೂ ಭಾರೀ ಹಾನಿ ಉಂಟಾಗಿದೆ. ಬ್ಯಾಂಕಾಕ್‌ನ ನಿರ್ಮಾಣಹಂತದಲ್ಲಿದ್ದ ಗಗನಚುಂಬಿ ಕಟ್ಟಡ ನೆಲಸಮವಾಗಿದ್ದು, ಅದರಲ್ಲಿದ್ದ ಹಲವಾರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಭಲ ಭೂಕಂಪ ಜೀವಗಳನ್ನು ಬಲಿ ತೆಗೆದುಕೊಂಡಿರುವುದರ ಜೊತೆಗೆ ಹಲವಾತು ಕಟ್ಟಡಗಳು, ಸೇತುವೆಗಳನ್ನೂ ನಾಶಪಡಿಸಿದೆ.

ಇನ್ನು ಮ್ಯಾನ್ಮಾರ್‌ನಲ್ಲಿ ವಿನಾಶ ಉಂಟಾದ ಪ್ರದೇಶದಲ್ಲಿ ರಕ್ತಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದು ಮ್ಯಾನ್ಮಾ‌ರ್ ಸರ್ಕಾರ ತಿಳಿಸಿದೆ. ಭೂಕಂಪದ ಹಿನ್ನೆಲೆ ಜುಂಟಾ ಸರ್ಕಾರ ಅಂತಾರಾಷ್ಟ್ರೀಯ ಸಹಾಯ ಕೋರಿದೆ. ಪತಿಹಾರ ಕಾರ್ಯಗಳನ್ನು ಪ್ರಾರಂಭಿಸಲು ವಿಶ್ವಸಂಸ್ಥೆ 5 ಮಿಲಿಯನ್ ಡಾಲರ್ ನಿಗದಿಪಡಿಸಿದೆ.

Home add -Advt

Related Articles

Back to top button