ಪ್ರಗತಿವಾಹಿನಿ ಸುದ್ದಿ : ಟಿಬೆಟ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತದೇಹಗಳು ಪತ್ತೆಯಾಗುತ್ತಲೇ ಇದ್ದು, ಇದೀಗ ಮೃತರ ಸಂಖ್ಯೆ 126ಕ್ಕೆ ಏರಿಕೆಯಾಗಿದೆ.
ಒಂದೂವರೆ ಗಂಟೆ ಅವಧಿಯೊಳಗೆ ಆರು ಬಾರಿ ಭೂಕಂಪ ಸಂಭವಿಸಿವೆ. ಬೆಳಗ್ಗೆ 6:35ಕ್ಕೆ ಸಂಭವಿಸಿದ 7.1 ತೀವ್ರತೆಯ ಭೂಕಂಪದ ನಂತರವೂ ಒಂದರ ಹಿಂದೆ ಒಂದರಂತೆ ಭೂಕಂಪನದಿಂದ ಜನರು ಭಯಭೀತರಾಗಿದ್ದರು.
ಭೂಕಂಪದ ತೀವ್ರತೆಗೆ ಹಲವು ಕಟ್ಟಡಗಳು ನೆಲಕ್ಕುರುಳಿದ್ದು ಘಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದೀಗ ಚೀನಾದ ಸ್ಟೇಟ್ ಕೌನ್ಸಿಲ್, ಟಿಬೆಟ್ ಪ್ರದೇಶಕ್ಕೆ ರಾಷ್ಟ್ರೀಯ ಕಾರ್ಯಪಡೆಯನ್ನು ಕಳುಹಿಸಿದ್ದು, ಕಟ್ಟಡದ ಅಡಿಯಲ್ಲಿ ಸಿಲುಕಿದವರನ್ನು ಹೊರತೆಗೆಯಲಾಗುತ್ತಿದೆ. ಇಲ್ಲಿಯ ವರೆಗೆ ಸುಮಾರು ನೂರಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದ್ದು, ಮೃತರ ಸಂಖ್ಯೆ 126ಕ್ಕೆ ಏರಿಕೆಯಾಗಿದೆ. ಅಲ್ಲದೇ ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ