ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ (ವಿದ್ಯುತ್ ಮತ್ತು ವಿದ್ಯುನ್ಮಾನ ಅಭಿಯಾಂತ್ರಿಕ ) ಎಂಜಿನಿಯರಿಂಗ್ ವಿಭಾಗಗಳ ವತಿಯಿಂದ ’ಪವರ್ ಸಿಸ್ಟಮ್‌ನಲ್ಲಿ ಮ್ಯಾಟ್ ಲ್ಯಾಬ್ ಮತ್ತು ಸಿಂಕ್ ಲಿಂಕ್ ಗಳ ಉಪಯೋಗ’ ವಿಷಯ ಕುರಿತು ಎರಡು ದಿನಗಳ ಕೌಶಲ ಅಭಿವೃದ್ಧಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ನಿಟ್ಟೆ ಅಭಿಯಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ನಾಗೇಶ ಪ್ರಭು, ವಿದ್ಯುತ್ ವ್ಯವಸ್ಥೆಗಳ ಉನ್ನತೀಕರಣ ಹಾಗೂ ದಕ್ಷತೆಯನ್ನು ಹೆಚ್ಚಿಸುವಲ್ಲಿ ಮ್ಯಾಟ್ ಲ್ಯಾಬ್, ಸಿಮ್ಯುಇನ್ ಸಾಫ್ಟ್‌ವೇರ್ ಬಳಕೆ ಹೇಗೆ ಸಹಾಯ ಮಾಡುತ್ತವೆ ಎಂಬ ಬಗ್ಗೆ ವಿವರಿಸಿ ಫ್ಲೆಕ್ಸಿಬಲ್ ಎಸಿ ಟ್ರಾನ್ಸಮಿಷನ್ ಸಿಸ್ಟಮ್ಸ್, ಸ್ಟ್ಯಾಟಿಕ್ ಸಿಂಕ್ರೊನಸ್ ಕಾಂಪೆನ್ಸೇಟರ್, ಸ್ಟ್ಯಾಟಿಕ್ ಸಿಂಕ್ರೊನಸ್ ಸೀರೀಸ್ ಕಂಪೆನ್ಸೇಟರ್ ಮತ್ತು ಸಿಂಗಲ್ ಮೆಷಿನ್ ಇನಫೈನೈಟ್ ಬಸ್ ವಿಷಯಗಳ ಮೇಲೆ ತಾಂತ್ರಿಕ ಉಪನ್ಯಾಸ ಮಂಡಿಸಿದರು.
ಸಂಪನ್ಮೂಲ ವ್ಯಕ್ತಿ ಜಿಐಟಿ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ಡಿ.ಬಿ. ಕುಲಕರ್ಣಿ ಥೈರಿಸ್ಟರ್ ಕಂಪೆನ್ಸೇಶನ್ ಉಪಕರಣಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಚಾರ್ಯ ಡಾ. ಎ.ಎಸ್. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ. ಡಿ.ಆರ್.ಜೋಶಿ, ಕಾರ್ಯಕ್ರಮದ ಸಂಯೋಜಕ ಪ್ರೊ. ಸತೀಶ ದೊಡ್ಡಮನಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.