Latest

ಪಂಚರಾಜ್ಯ ಫಲಿತಾಂಶ: ಉತ್ತರ ಪ್ರದೇಶ ಸೇರಿ 3 ಕಡೆ ಬಿಜೆಪಿ ಮುನ್ನಡೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು, ಎಲ್ಲರ ಗಮನ ಸೆಳೆದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆದಿದೆ. ಈವರೆಗೆ 202 ಸ್ಥಾನಗಳಲ್ಲಿ ಬಿಜೆಪಿ ಮುಂದಿದ್ದು, ಸಮಾಜವಾದಿ ಪಕ್ಷ 112 ಸ್ಥಾನಗಳಲ್ಲಿ ಮುಂದಿದೆ.

ಉತ್ತರಾಖಂಡದಲ್ಲಿ ಬಿಜೆಪಿ 36 ಸ್ಥಾನಗಳಲ್ಲಿ ಮುನ್ನಡೆದಿದೆ. ಕಾಂಗ್ರೆಸ್ 30 ಸ್ಥಾನಗಳಲ್ಲಿ ಮುಂದಿದೆ. ಪಂಜಾಬ್ ನಲ್ಲಿ 59 ಸ್ಥಾನಗಳಲ್ಲಿ ಆಮ್ ಆದ್ಮಿ ಪಾರ್ಟಿ ಮುನ್ನಡೆ ಸಾಧಿಸಿದೆ. ಆಪ್ ಅಧಿಕಾರಕ್ಕೇರುವತ್ತ ಮುನ್ನಡೆದಿದೆ. ಕಾಂಗ್ರೆಸ್ 2ನೇ ಸ್ಥಾನದಲ್ಲಿದೆ.

Home add -Advt

ಮಣಿಪುರದಲ್ಲಿ ಬಿಜೆಪಿ 19 ಸ್ಥಾನದೊಂದಿಗೆ ಮುಂದಿದೆ. ಇಲ್ಲಿ ಕಾಂಗ್ರೆಸ್ 15 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಗೋವಾದಲ್ಲಿ ಕಾಂಗ್ರೆಸ್ 18 ಸ್ಥಾನದೊಂದಿಗೆ ಮುಂದಿದೆ. ಬಿಜೆಪಿ 2ನೇ ಸ್ಥಾನದಲ್ಲಿದೆ.

 

Related Articles

Back to top button