Kannada NewsKarnataka News

*ಹಲಸಿನ ಹಣ್ಣು ಕೊಯ್ಯಲು ಹೋದ ದಂಪತಿಗೆ ವಿದ್ಯುತ್ ಶಾಕ್: ಆಸ್ಪತ್ರೆಗೆ ದಾಖಲು*

ಪ್ರಗತಿವಾಹಿನಿ ಸುದ್ದಿ: ದಂಪತಿಗಳಿಬ್ಬರು ಹಲಸಿನ ಹಣ್ಣು ಕೊಯ್ಯಲೆಂದು ಹೋದ ವೇಳೆ ವಿದ್ಯುತ್ ಶಾಕ್ ಹೊಡೆದು ಆಸ್ಪತ್ರೆ ಸೇರಿರುವ ಘಟನೆ ದಕ್ಷಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕದ ಬಳಿ ನಡೆದಿದೆ.‌

ಸೋಮವಾರ ಮುಂಜಾನೆ ಸುಳ್ಯದ ಉಬರಡ್ಕದ ಸೊಸೈಟಿ ಸಮೀಪವಿರುವ ಕೃಷಿಕರಾದ ಸದಾಶಿವ ಭಟ್ ಎಂಬುವರ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ ಜಾರ್ಖಾಂಡ್ ಮೂಲದ ರಾಜು ಮತ್ತು ಸುನೀತಾಗೆ ವಿದ್ಯುತ್ ಶಾಕ್ ಹೊಡೆದಿದೆ ಎಂದು ತಿಳಿದು ಬಂದಿದೆ.

ಈ ದಂಪತಿ ಕಬ್ಬಿಣದ ಗಳೆಯಲ್ಲಿ ಹಲಸಿನ ಹಣ್ಣು ಕೊಯ್ಯುತ್ತಿದ್ದಾಗ ವಿದ್ಯುತ್ ತಂತಿಗೆ ಗಳೆ ತಾಗಿ ವಿದ್ಯುತ್ ಪ್ರವಹಿಸಿ ಶಾಕ್‌ ಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಕೂಡಲೇ ಅವರನ್ನು ಗ್ರಾ.ಪಂ. ಸದಸ್ಯರೊಬ್ಬರ ಕಾರಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆತಂದಿದ್ದು ಚಿಕಿತ್ಸೆ ನೀಡಲಾಗುತ್ತಿದೆ. 

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button