Belagavi NewsBelgaum NewsKannada NewsKarnataka News

*ಮತ ಎಣಿಕೆಯನ್ನು ಸಮರ್ಪಕವಾಗಿ ಪರಿಶೀಸಿ: ರೈತ ಮುಖಂಡ ಸಿದ್ದಗೌಡ ಮೋದಗಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತ ಏಣಿಕೆಯು ಜೂನ್ 4ರಂದು ನಡೆಯಲಿದೆ. ಎಣಿಕೆ ಕಾರ್ಯ ನಡೆಯುವಾಗ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ರೈತ ಮುಖಂಡ ಸಿದ್ದಗೌಡ ಮೋದಗಿ ಹೇಳಿದರು.

Home add -Advt

ಸೋಮವಾರ ಎದ್ದೇಳು ಕರ್ನಾಟಕ ಸಂಘಟನೆ ಸೇರಿ ವಿವಿಧ ಸಂಘಟನೆ ಗಳಿಂದ ಜೂನ್ 4 ರಂದು ಮತ ಏಣಿಕೆ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.‌

ಬಳಿಕ ಮಾತನಾಡಿದ ರೈತ ಮುಖಂಡ ಸಿದಗೌಡ ಮೋದಗಿ ಜೂನ್ 04 ರಂದು ನಡೆಯುವ ಮತ ಏಣಿಕೆ ಸಂದರ್ಭದಲ್ಲಿ ಫಾರಂ 17ಸಿಯ ಒಂದು ಪ್ರತಿ ಪ್ರತಿಯೊಬ್ಬ ಅಭ್ಯರ್ಥಿಗೂ ದೊರೆಯುವಂತೆ ನೋಡಿಕೊಂಡು 17ರಲ್ಲಿನ ಮಾಹಿತಿಯೊಂದಿಗೆ ತಾಳೆಯಾಗುವ ಫಾರಂ ಬಿ ಒದಗಿಸಿ ಜಿಲ್ಲಾಡಳಿತ ಮತ ಏಣಿಕೆ ಸಂದರ್ಭದಲ್ಲಿ ನಿಗಾ ವಹಿಸಬೇಕೆಂದು ಹೇಳಿದರು. 

ಈ ವೇಳೆ ಯಲಪ್ಪ ಹಿಮ್ಮಡಿ ,ಸೋಮಪ್ಪ ಬದುರ್ಗಿ ಶಂಕರ ಢವಳಿ ಸಂಜೀವ್ ಡೊಂಗ್ರಿ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Related Articles

Back to top button