Karnataka News

*ರಾಜ್ಯ ರಾಜಧಾನಿಯಲ್ಲಿ ಸಂಜೆಯಾಗುತ್ತಿದ್ದಂತೆ ಸುರಿದ ಮಳೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ನಗರದ ಹಲವೆಡೆ ಸಂಜೆಯಾಗುತ್ತಿದ್ದಂತೆ ಬಿರುಗಾಳಿ ಸಹಿತ ಮಳೆಯಾಗಿದೆ. ಬಿಸಿಲ ಧಗೆಯಿಂದ ಕಂಗಾಲಾಗಿದ್ದ ರಾಜ್ಯ ರಾಜಧಾನಿಯ ಜನತೆಗೆ ತಂಪೆರದಂತಾಗಿದೆ.

Home add -Advt

ಸಂಜೆಯಾಗುತ್ತಿದ್ದಂತೆ ಬೆಂಗಳೂರಿನ ಹಲವೆಡೆ ದಿಡೀರ್ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ಬೀದಿಬದಿ ವ್ಯಾಪಾರಸ್ತರು ನಿರಾಶರಾಗಿ, ಎದ್ದುಬಿದ್ದು ವ್ಯಾಪಾರವನ್ನು ಬಂದ್ ಮಾಡಿ ಮನೆಯತ್ತ ಹೆಜ್ಜೆಹಾಕಿದ್ದಾರೆ.

ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಶಾಂತಿ ನಗರ, ಕಾರ್ಪೊರೇಷನ್, ರಿಚ್ ಮಂಡ್ ಸರ್ಕಲ್, ಆರ್.ಆರ್.ನಗರ, ಮೈಸೂರು ರಸ್ತೆ, ಉತ್ತರಹಳ್ಳಿ, ಗಿರಿನಗರ, ನಾಯಂಡಹಳ್ಳಿ, ಹೊಸಕೆರೆಹಳ್ಳಿ, ರಾಜಾಜಿನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಹವಾಮಾನ ಇಲಾಖೆ ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಅದರಂತೆ ಇಂದು ಸಂಜೆ ಬೆಂಗಳೂರಿನಲ್ಲಿ ಮಳೆಯಿಂದಾಗಿ ಬಿಸಿಲ ಝಳಕ್ಕೆ ಕಂಗೆಟ್ತಿದ್ದ ಜನತೆಗೆ ತಂಪೆರೆದಂತಾಗಿದೆ.

Related Articles

Back to top button