Kannada NewsKarnataka NewsLatestPragativahini Special

*ವಿಧಾನಸೌಧದಲ್ಲಿ ವಿದ್ಯುತ್, ನೀರಿನ ಮಿತವ್ಯಯ; ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ*: *ಪ್ರಗತಿವಾಹಿನಿ ವರದಿಗೆ ಸರಕಾರದ ಸ್ಪಷ್ಟನೆ*


“ವಿಧಾನಸೌಧದಲ್ಲಿ ವಿದ್ಯುತ್, ನೀರಿನ ಮಿತವ್ಯಯ: ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ”

ಸಾರಾಂಶ:

  1. ಟೈಮರ್ ಮೂಲಕ ಬೀದಿ ದೀಪ, ಕಚೇರಿ ಬಳಿಕ ಎಲ್ಲಾ ಲೈಟ್ ಆಫ್ – ವಿದ್ಯುತ್ ಉಳಿತಾಯಕ್ಕೆ ಕ್ರಮ
  2. Ball Valve ಅಳವಡಿಕೆ, ಸಂಸ್ಕರಿಸಿದ ನೀರಿನ ಬಳಕೆ – ನೀರು ವ್ಯರ್ಥ ತಡೆ
  3. Rain Water Harvesting ಮತ್ತು BWSSB ಸಹಕಾರ – ನೀರಿನ ಸಂರಕ್ಷಣೆಗೆ ಒತ್ತು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿಧಾನಸೌಧ ಹಾಗೂ ಇತರೆ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಮತ್ತು ನೀರಿನ ಸಂರಕ್ಷಣೆ ಕುರಿತು ಪ್ರಗತಿವಾಹಿನಿಯಲ್ಲಿ ವರದಿಯಾಗಿರುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ರಾಜ್ಯ ಸರ್ಕಾರವು ಸಂರಕ್ಷಣೆಗೆ ಈಗಾಗಲೇ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದೆ.

Home add -Advt

ವಾರ್ತಾ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪರ ಈ ಸ್ಪಷ್ಟನೆ ನೀಡಿದ್ದಾರೆ. ಅದರ ಪೂರ್ಣ ವಿವರ ಇಲ್ಲಿದೆ –

ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳು:

  1. ವಿದ್ಯುತ್ ಮಿತವ್ಯಯ: ವಿಧಾನಸೌಧದ ಆವರಣದಲ್ಲಿರುವ ಹೊರಾಂಗಣ ವಿದ್ಯುತ್ ದೀಪಗಳನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕೆ ಅನುಗುಣವಾಗಿ ಆಟೋಮ್ಯಾಟಿಕ್ ಟೈಮರ್ ಮೂಲಕ On/Off ಮಾಡಲಾಗುತ್ತಿದೆ. ಪ್ರತಿದಿನ ಕಚೇರಿ ಮುಗಿದ ನಂತರ ಗ್ರೂಪ್-ಡಿ ಸಿಬ್ಬಂದಿಯಿಂದ ಎಲ್ಲಾ ದೀಪಗಳು ಮತ್ತು ಅನಗತ್ಯ ವಿದ್ಯುತ್ ಉಪಕರಣಗಳನ್ನು ಬಂದ್ ಮಾಡಲಾಗುತ್ತದೆ. ಎಲ್ಲಾ ಏರ್ ಕಂಡಿಷನರ್‌ಗಳನ್ನು 24 ರಿಂದ 26 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬಳಸುವಂತೆ ಸೂಚಿಸಲಾಗಿದೆ.
  2. ನೀರಿನ ಸಂರಕ್ಷಣೆ: ಮೇಲ್ಛಾವಣಿಯ ನೀರಿನ ಟ್ಯಾಂಕ್‌ಗಳಿಂದ ನೀರು ವ್ಯರ್ಥವಾಗದಂತೆ Ball Valve ಅಳವಡಿಸಲಾಗಿದೆ. ವಿಧಾನಸೌಧದ ನೀರಿನ ಸೋರಿಕೆ ಮತ್ತು ಅನಗತ್ಯ ಬಳಕೆಯನ್ನು ತಡೆಗಟ್ಟಲು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ. ಉದ್ಯಾನಗಳಿಗೆ ಸಂಸ್ಕರಿಸಿದ ನೀರನ್ನೇ ಬಳಸಲಾಗುತ್ತಿದೆ.
  3. ಇತರೆ ವ್ಯವಸ್ಥೆ: ವಿಧಾನಸೌಧದಲ್ಲಿ ಈಗಾಗಲೇ ಎರಡು ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. Rain Water Harvesting ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿದೆ. ನೀರಿನ ಮಿತವ್ಯಯದ ಬಗ್ಗೆ BWSSB ಯ ತಾಂತ್ರಿಕ ಸಹಕಾರವನ್ನೂ ಪಡೆಯಲಾಗುತ್ತಿದೆ.

ಈ ಎಲ್ಲಾ ಕ್ರಮಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಸೀಲಸುಣಿ ಮತ್ತು ಜೂನಿಯರ್ ಇಂಜಿನಿಯರ್ ಅವರು ನಿಯಮಿತವಾಗಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು 21.02.2022 ರಂದೇ ಮಾರ್ಗಸೂಚಿಗಳನ್ನು ಹೊರಡಿಸಿದೆ.


Related Articles

Back to top button