Kannada NewsKarnataka News

ಡಾಲ್ಫಿನ್ ಎಂ ಸ್ಯಾಂಡ್ ಪ್ಲ್ಯಾಂಟ್ ನಲ್ಲಿ ಪರಿಸರ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಯರಗಟ್ಟಿಯ ಡಾಲ್ಫಿನ್ ಎಂ ಸ್ಯಾಂಡ್ ಪ್ಲ್ಯಾಂಟ್ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.

ಮಾಲಿಕ ಪಾಂಡುರಂಗ ರಡ್ಡಿ ನೇತೃತ್ವದಲ್ಲಿ ಪ್ಲ್ಯಾಂಟ್ ಸಿಬ್ಬಂದಿ ಗಿಡಗಳನ್ನು ನೆಟ್ಟರು. ಈ ವೇಳೆ ಮಾತನಾಡಿದ ಪಾಂಡುರಂಗ ರಡ್ಡಿ, ನಾವು ಅರಿತೋ, ಅರಿಯದೆಯೋ ಪರಿಸರಕ್ಕೆೆ ಹಾನಿಯುಂಟು ಮಾಡುತ್ತಲೇ ಇರುತ್ತೇವೆ. ಸಾಧ್ಯವಾದಷ್ಟು ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಿಸುವ, ಬೆಳೆಸುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.

Home add -Advt

ಎಂ ಸ್ಯಾಂಡ್ ಪರಿಸರ ಪೂರಕವಾಗಿದ್ದು, ಸಾರ್ವಜನಿಕರು ಎಂ ಸ್ಯಾಂಡ್ ನ್ನೇ ಬಳಸುವ ಮೂಲಕ ಪರಿಸರ ಉಳಿಸಲು ಮುಂದಾಗಬೇಕು ಎಂದೂ ಅವರು ವಿನಂತಿಸಿದರು.

ರಮೇಶ ಹೊಸೂರು, ಖಾಜಾ ಪಾಶಾ, ವಿಠ್ಠಲ್ ಬಿ., ಶಿವರಾಯ ದರನಾಯ್ಕ, ಬಸವರಾಜ ಮಾರಾಪುರ, ಮಹಾದೇವ ಪಾಟೀಲ ಮೊದಲಾದವರಿದ್ದರು.

ಪ್ರಧಾನಿ, ಮುಖ್ಯಮಂತ್ರಿ ಮೊದಲು ಪರಿಸರ ರಕ್ಷಣೆ ಮಾಡಲಿ : ಹುಕ್ಕೇರಿ ಶ್ರೀಗಳು

 

Related Articles

Back to top button