Kannada NewsLatest

*ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಾಣ: ಸಚಿವೆ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಯಕ್ಸಂಬಾ ಪಟ್ಟಣದ ಆರಾಧ್ಯದೇವ ಬೀರೇಶ್ವರ ದೇವರಿಗೆ ಗಡಿ ಭಾಗದಲ್ಲಿ ಅಪಾರ ಭಕ್ತರಿದ್ದು, ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಬೀರೇಶ್ವರ ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬೀರೇಶ್ವರ ಯಾತ್ರಿ ನಿವಾಸ ಕಟ್ಟಡ ಕಾಮಗಾರಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಮುಜರಾಯಿ ಇಲಾಖೆಯಿಂದ ಬೀರೇಶ್ವರ ಯಾತ್ರಿ ನಿವಾಸ ನಿರ್ಮಿಸಲು 25 ಲಕ್ಷರೂ ಅನುದಾನ ಮಂಜೂರಾಗಿದೆ, ಒಂದು ವೇಳೆ ಅನುದಾನ ಕಡಿಮೆ ಬಿದ್ದಲ್ಲಿ ಮತ್ತೆ ಹೆಚ್ಚುವರಿಯಾಗಿ ಅನುದಾನ ಮಂಜೂರು ಮಾಡುವುದಾಗಿ ಹೇಳಿದರು.

ಬೀರೇಶ್ವರನ ದರ್ಶನ ಪಡೆಯಲು ಪ್ರತಿ ರವಿವಾರ ಮತ್ತು ಅಮವಾಸ್ಯೆಯಂದು ಹಾಗೂ ಜಾತ್ರೆಯ ಸಂದರ್ಭದಲ್ಲಿ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ, ಬಂದ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾತ್ರಿನಿವಾಸ ನಿರ್ಮಿಸಲಿದ್ದೇವೆ ಎಂದ ಅವರು ನಮ್ಮ ಸಂಸ್ಥೆಗೆ ಬೀರೇಶ್ವರನ ಹೆಸರಿಟ್ಟಿರುವುದರಿಂದ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಮುಂದಿನ ದಿನಮಾನಗಳಲ್ಲಿ ಗುಜರಾತ ರಾಜ್ಯದಲ್ಲೂ ಶಾಖೆಗಳು ಪ್ರಾರಂಭಗೊಳ್ಳಲಿದ್ದು, ಬೀರೇಶ್ವರನ ಆಶಿರ್ವಾದದಿಂದ ಸಂಸ್ಥೆಯ ಜೋತೆಗೆ ಜೊಲ್ಲೆ ಮನೆತನವು ಎಲ್ಲಾ ಕ್ಷೇತ್ರದಲ್ಲಿ ಬೆಳವಣಿಗೆ ಯಾಗುತ್ತಿದೆ ಎಂದು ಹೇಳಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಯಾನಂದ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಮಾರುತಿ ಪೂಜಾರಿ, ದಿಲೀಪ ದೇಸಾಯಿ, ಕೃಷ್ಣಾ ಮಾಳಿ, ಮಹಾದೇವ ರಾಯಜಾಧವ, ಮಂಜುಶ್ರೀ ಕಟ್ಟಿಕರ, ರಾಜು ಮಗದುಮ್ಮ, ಚಿದಾನಂದ ಮೋಪಗಾರ,ರಾಜು ಕಟ್ಟಿಕರ, ಅಣ್ಣಪ್ಪ ಪೂಜಾರಿ ವೈಶಾಲಿ ಮಗದುಮ್ಮ ಸೇರಿದಂತೆ ಕಮಿಟಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Home add -Advt

*ಸಚಿವ ಸಂಪುಟ ವಿಸ್ತರಣೆ ಈಗ ಯಾರಿಗೆ ಬೇಕಾಗಿದೆ; ಎಲ್ಲಾ ಸಿಎಂ ಅವರೇ ಇಟ್ಟುಕೊಳ್ಳಲಿ…*

https://pragati.taskdun.com/belagavibasana-gowdapatil-yatnalcabinet-extantionreaction/

*BREAKING NEWS: ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ದೃಢ*

https://pragati.taskdun.com/karnata1st-zika-virus5-yers-girlraichurmanvi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button