ಪ್ರಗತಿವಾಹಿನಿ ಸುದ್ದಿ; ಮೈಸೂರು: ಪ್ರತಿಷ್ಠಿತ ಕೆ ಎಂ ಎಫ್ ಕಂಪನಿಯ ನಂದಿನಿ ತುಪ್ಪದ ಹೆಸರಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲದ ಮೇಲೆ ಪೊಲಿಸರು ದಾಳಿ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಚಾಮುಂಡಿ ಬೆಟ್ಟದ ಹಿಂಭಾಗ ಹೊಸಹುಂಡಿ ಗ್ರಾಮದಲ್ಲಿ ಗೌಡನ್ ನಲ್ಲಿ ಟನ್ ಗಟ್ಟಲೆ ನಕಲಿ ತುಪ್ಪ ಹಾಗೂ ಲೇಬಲ್ ಗಳ ಮುದ್ರಣ ಘಟಕ ಪತ್ತೆಯಾಗಿದೆ. ನಂದಿನಿ ತುಪ್ಪಕ್ಕೆ ಡಾಲ್ಡಾ ಬೆರೆಸಿ ಮಾರಾಟ ಮಾಡುತ್ತಿದ್ದ ಜಾಲ ಇದಾಗಿದ್ದು, ಜಿವನ್ ತುಪ್ಪದ ಕಂಪನಿಯಿಂದ ಈ ಜಾಲ ಸಿಕ್ಕಿಬಿದ್ದಿದೆ. ನಂದಿನಿ ತುಪ್ಪದಂತೆ ಕಾಣಲು ಡಾಲ್ಡಾ ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿಸಿ ಮೈಸೂರು ನಗರದಾದ್ಯಂತ ವಿತರಣೆ ಮಾಡಲಾಗುತ್ತಿತ್ತು. ಕಳೆದ ನಾಲ್ಕು ತಿಂಗಳಿಂದ ಈ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ.
ನಂದಿನಿ ತುಪ್ಪ ಖರೀದಿ ಮಾಡುತ್ತಿದ್ದ ಚಂದ್ರು ಜಾಲದ ರೂವಾರಿ. ಸ್ಥಳಕ್ಕೆ ಮೈಮುಲ್ ಎಂ.ಡಿ ವಿಜಯ್ ಕುಮಾರ್ ಹಾಗೂ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಷತ್ ಚುನಾವಣೆ ಬಂಡಾಯ: ಬಿಜೆಪಿಯಿಂದ ಉಚ್ಛಾಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ