Film & EntertainmentKannada NewsKarnataka News

ಖ್ಯಾತ ನಟಿ ಲೀಲಾವತಿ ನಿಧನಕ್ಕೆ ಡಾ. ಕೋರೆ ಶೋಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಖ್ಯಾತ ನಟಿ ಲೀಲಾವತಿಯವರು ವಿಧಿವಶವಾಗಿರುವುದು ನಾಡಿಗೆ ತುಂಬಲಾರದ ಹಾನಿಯಾಗಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರು ಕಂಬನಿ ಮಿಡದಿದ್ದಾರೆ.

ತಮ್ಮ ಅದ್ಭುತ ಕಲೆ ಹಾಗೂ ಅಭಿನಯದ ಮೂಲಕ ಕನ್ನಡ ಚಲನಚಿತ್ರ ರಂಗವನ್ನು ಶ್ರೀಮಂತಗೊಳಿಸಿದ್ದರು. ಪೌರಾಣಿಕ, ಸಾಮಾಜಿಕ ಹಾಗೂ ಐತಿಹಾಸಿಕ ಪಾತ್ರಾಭಿನಯದ ಮೂಲಕ ಕಲಾ ರಸಿಕರನ್ನು ಮಂತ್ರ ಮುಗ್ಧರನ್ನಾಗಿ ಮಾಡಿದ್ದರು. ಅವರ ಚಲನಚಿತ್ರಗಳಲ್ಲಿ ಸಾಮಾಜಿಕ ಸಂದೇಶ ಮನೆ ಮಾಡಿರುತ್ತಿತ್ತು. 70ರ ದಶಕದಲ್ಲಿ ಬೆಳ್ಳಿ ಪರದೆಯ ಮೇಲೆ ಸ್ತ್ರೀ ಪಾತ್ರಗಳು ಕೊರತೆಯಿದ್ದ ಸಂದರ್ಭದಲ್ಲಿ ಅದಕ್ಕೆ ಜೀವ ತುಂಬುವ ಕೆಲಸವನ್ನ ಮಾಡಿದಂತಹ ಹಿರಿಯ ನಟಿ ಲೀಲಾವತಿಯವರು. ಬಹುಭಾಷಾ ನಟಿಯಾಗಿಯೂ ಕೂಡ ರಂಗಭೂಮಿ ಚಲನಚಿತ್ರ ಕ್ಷೇತ್ರಗಳನ್ನು ವಿಸ್ತಾರ ಗೊಳಿಸಿದ್ದರು. ಅವರ ಅಗಲಿಕೆ ಚಲನಚಿತ್ರ ರಂಗವನ್ನು ಬಡವಾಗಿಸಿದೆ ಎಂದು ಕೋರೆ ಅವರು ದುಃಖ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button