
ಪ್ರಗತಿವಾಹಿನಿ ಸುದ್ದಿ : ಬಾಲಿವುಡ್‌ನ ಖ್ಯಾತ ನಟ ವಿಕಾಸ್ ಸೇಥಿ (48) ಇಂದು ಹೃದಯಾಘಾತದಿಂದ ಮುಂಬೈನಲ್ಲಿ ಮೃತಪಟ್ಟಿದ್ದಾರೆ. ವಿಕಾಸ್ ಅವರು ಮನೆಯಲ್ಲಿರುವಾಗ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಡ್ಯಾನ್ಸಿಂಗ್ ರಿಯಾಲಿಟಿ ಶೋ ನಚ್ ಬಲಿಯೆ 3ನೇ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದ ಅವರು 2000ರ ದಶಕದ ಪ್ರಸಿದ್ಧ ದೈನಂದಿನ ಸೋಪ್ ಒಪೆರಾಗಳಲ್ಲಿ ಪೋಷಕ ಪಾತ್ರಗಳಿಗೆ ಖ್ಯಾತಿ ಪಡೆದಿದ್ದರು.
ಇದಲ್ಲದೇ ಕಸೌತಿ ಜಿಂದಗಿ ಕೇ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ, ಕಹಿನ್ ತೊ ಹೋಗಾ ಸೇರಿದಂತೆ ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿ ವಿಕಾಸ್ ನಟಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ