Belagavi NewsBelgaum NewsKannada NewsKarnataka NewsNationalPolitics
*ಬೆಳಗಾವಿಯ ಖ್ಯಾತ ಕೈಗಾರಿಕೋದ್ಯಮಿ ಬಾಳಾಸಾಹೇಬ್ ಪಾಟೀಲ್ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಂದವಾಡಿಯ ನಿವಾಸಿ ಮತ್ತು ಖ್ಯಾತ ಕೈಗಾರಿಕೋದ್ಯಮಿ ಬಾಳಾಸಾಹೇಬ್ ಪಾಟೀಲ್ ಅವರು ನಿಧನರಾಗಿದ್ದಾರೆ.
ಬಿ.ಟಿ. ಪಾಟೀಲ್ ಸಮೂಹದ (
ಪ್ಯಾಟ್ಸನ್ ಸಮೂಹ) ನಿರ್ಮಾತೃ ಬಾಳಾಸಾಹೇಬ ಭರ್ಮಗೌಡ ಪಾಟೀಲ್ (93) ಇಂದು ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಧರು.
ಅವರು ಪತ್ನಿ, ಇಬ್ಬರು ಪುತ್ರರಾದ ಸಚಿನ್ ಮತ್ತು ತುಷಾರ್, ಮಗಳು, ಸೊಸೆ, ಅಳಿಯ, ಮೊಮ್ಮಕ್ಕಳು, ಸಹೋದರ ಪ್ರಭಾಕರ್ ಪಾಟೀಲ್ ಮತ್ತು ಸಹೋದರಿ ಶಾಲಿನಿ ಅವರನ್ನು ಅಗಲಿದ್ದಾರೆ.
ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಲ್ಲೂ ಕೂಡಾ ಅವರು ಶ್ರಮ ವಹಿಸಿದ್ದಾರೆ. ಅವರು ಇಪ್ಪತ್ತೈದು ವರ್ಷಗಳ ಕಾಲ ಮಹಾವೀರ ಸಹಕಾರಿ ಬ್ಯಾಂಕಿನ ಅಧ್ಯಕ್ಷರೂ ಆಗಿದ್ದರು.
ಸುಂದರಬಾಯಿ ಪಾಟೀಲ್ ಬಿ.ಎಡ್ ಕಾಲೇಜು, ಮಹಾವೀರ ಭವನ ಮುಂತಾದ ಸಂಸ್ಥೆಗಳ ಸ್ಥಾಪನೆಯಲ್ಲಿ ಮತ್ತು ಜೈನ ಸಮುದಾಯದ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಕೊಡುಗೆ ನೀಡಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 1 ಗಂಟೆಗೆ ಶಹಾಪುರದ ಸ್ಮಶಾನ ಭೂಮಿಯಲ್ಲಿ ನೇರವೆರಲಿದೆ.




