Latest

ಇಂಡಿಗೋ ವಿಮಾನದಲ್ಲಿ ಕಂಡುಬಂದ ಹೊಗೆ: ನಾಗಪುರದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್

ಪ್ರಗತಿ ವಾಹಿನಿ ಸುದ್ದಿ; ನಾಗಪುರ: ನಾಗಪುರದಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ನಾಗಪುರ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರ ಸಂಚಾರ ಮಾಡುತ್ತಿದ್ದಂತೆಯೇ ಹೊಗೆ ಕಂಡುಬಂದಿದೆ. ತಕ್ಷಣ ಏರರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಆದೇಶದಂತೆ ವಿಮಾನವನ್ನು ನಾಗಪುರ ಏರ್‌ಪೋರ್ಟ್ನಲ್ಲಿಯೇ ತುರ್ತು ನಿಲುಗಡೆ ಮಾಡಲಾದ ಘಟನೆ ಸೋಮವಾರ ನಡೆದಿದೆ.

6E-7074 ವಿಮಾನ ನಾಗಪುರದಿಂದ ಲಕ್ನೋಗೆ ತೆರಳುತ್ತಿತ್ತು. ವಿಮಾನದಲ್ಲಿ ತಾಂತ್ರಿಕ ದೋಷದಿಂದ ಹೊಗೆ ಕಂಡುಬಂದಿದ್ದು ತಕ್ಷಣ ವಿಮಾನವನ್ನು ನಾಗಪುರದಲ್ಲಿಯೇ ತುರ್ತು ನಿಲುಗಡೆ ಮಾಡಲಾಯಿತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನದಲ್ಲಿ ಹೊಗೆ ಕಂಡುಬಂದ ಕುರಿತು ತನಿಖೆಗೆ ಆದೇಶ ಮಾಡಲಾಗಿದೆ ಎಂದು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಕಚೇರಿ ತಿಳಿಸಿದೆ.
ಸುದ್ದಿ ವೆಬ್ ಸೈಟ್ ಸೇರಿ 22ಬ್ ಯೂಟ್ಯೂಬ್ ಚಾನಲ್ ಬ್ಯಾನ್

Home add -Advt

Related Articles

Back to top button