Film & Entertainment

*ಖ್ಯಾತ ತಮಿಳು ನಟ ಡೆಲ್ಲಿ ಗಣೇಶ್ ನಿಧನ*

ಪ್ರಗತಿವಾಹಿನಿ ಸುದ್ದಿ : ಹಲವು ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆಗಳಿಂದಾಗಿ ಬಳಲುತ್ತಿದ್ದ ಖ್ಯಾತ ತಮಿಳು ನಟ ಡೆಲ್ಲಿ ಗಣೇಶ್ (80) ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. 

ತಮಿಳು, ತೆಲಗು ಹಾಗೂ ಮಲಯಾಳಂ ಭಾಷೆಯ 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮುಖ್ಯ ಪಾತ್ರ, ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಡೆಲ್ಲಿ ಗಣೇಶ್ ಅವರ ಅಗಲಿಕೆಗೆ ಹಿರಿಯ ನಟರು ಸಂತಾಪ ಸೂಚಿಸಿದ್ದಾರೆ.

Home add -Advt

ಖ್ಯಾತ ನಿರ್ದೇಶಕ ಬಾಲಚಂದ್ರ.ಕೆ ಅವರ ಪಟ್ಟಣ ಪ್ರವೇಶ ಸಿನಿಮಾದಿಂದ ಚಿತ್ರರಂಗ ಪ್ರವೇಶಿಸಿದ್ದ ಡೆಲ್ಲಿ ಗಣೇಶ್ ಅವರು ನಾಯಗನ್, ಮೈಕೆಲ್ ಮದನ್ ಕಾಮರಾಜ್, ಅಪೂರ್ವ ಸಹೋದರಂಗಳ್, ಆಹಾ, ತೆನಾಲಿ, ಎಂಗಮ್ಮ ಮಹಾರಾಣಿ ಮುಂತಾದ ಸಿನಿಮಾಗಳಿಂದಾಗಿ ಪ್ರಸಿದ್ದಿ ಪಡೆದಿದ್ದರು.

ಅವರು ಚಿತ್ರರಂಗಕ್ಕೆ ಕಾಲಿರಿಸುವ ಮುನ್ನ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ.

Related Articles

Back to top button