Latest

ಶರಾವತಿ ನದಿಗೆ ಬಿದ್ದ ಪ್ರಯಾಣಿಕರ ಬಸ್

 

Home add -Advt

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಪ್ರಯಾಣಿಕರ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಶರಾವತಿ ನದಿಗೆ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರಿನ ಹೊಳೆಬಾಗಿಲು ಬಳಿ ನಡೆದಿದೆ.

ಸಿಗಂದೂರಿನತ್ತ ಹೋಗಲು ಬಸ್ ನ್ನು ಲಾಂಚ್ ಗೆ ಹತ್ತಿಸಲು ರಿವರ್ಸ್ ನಲ್ಲಿ ಹತ್ತಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ನದಿಗೆ ಬಿದ್ದಿದೆ. ಗಜಾನನ ಕಂಪನಿಯ ಬಸ್ ಇದಾಗಿದ್ದು, ಬಸ್ ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

ತಕ್ಷಣ ಸಮೀಪವೇ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕ್ರೇನ್ ಬಳಸಿ ಬಸ್ ನ್ನು ಮೇಲಕೆತ್ತಲಾಗಿದೆ. ಕೆಲ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಹಾರಾಷ್ಟ್ರದ ಕೆಲ ಜಿಲ್ಲೆಗಳನ್ನು ಸೇರಿಸಿ ಕರ್ನಾಟಕದ ಹೊಸ ನಕ್ಷೆ ತಯಾರಿಸಿದ ’ಮಹಾ ಕನ್ನಡಿಗರು’

https://pragati.taskdun.com/karnatakanew-mapmaharashtra-kannadigaru/

Related Articles

Back to top button