ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಳೀಯ ಹಾಲು ಉತ್ಪಾದಕರ ಕೇಂದ್ರ ರೈತರಿಂದ ಹಾಲು ಖರೀದಿಸದ ಹಿನ್ನೆಲೆಯಲ್ಲಿ ರೈತರು 250 ಲೀಟರ್ ಹಾಲನ್ನು ಚರಂಡಿಗೆ ಸುರಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಲಕ್ಕವ್ವ ಗ್ರಾಮದಲ್ಲಿ ರೈತರು ಬರೋಬ್ಬರಿ 250 ಲೀಟರ್ ಹಾಲನ್ನು ಚರಂಡಿಗೆ ಸುರಿದಿದ್ದಾರೆ. ಹಾಲು ಉತ್ಪಾದನಾ ಕೇಂದ್ರ ರೈತರಿಂದ ಹಾಲು ಖರೀದಿಸುತ್ತಿಲ್ಲ ಅಲ್ಲದೇ ಹಾಲಿನ ಡಿಗ್ರಿ 4.1 ರೂ ಏರಿಕೆ ಮಾಡಲಾಗಿದೆ ಎಂದು ರೈತರು ಕಿಡಿಕಾರಿದ್ದಾರೆ.
ರೈತರಿಂದ ಹಾಲು ಖರೀದಿಸದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೀದಾಗಿದ್ದಾರೆ.
ರಾಜ್ಯದಲ್ಲಿ ಕೊರೋನಾ ಭಾರಿ ಇಳಿಕೆ: ಪಾಸಿಟಿವಿಟಿ ಶೇ.7.71; ಸಮಗ್ರ ವಿವರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ