Belagavi NewsBelgaum NewsKannada NewsKarnataka News

*ಹಿರೇಬಾಗೇವಾಡಿ ಬಳಿ ಭೀಕರ ಅಪಘಾತ: ಇಬ್ಬರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾವಿನ ಹೆದ್ದಾರಿ ಎಂದು ಬಿಂಬತವಾಗಿರುವ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿಯ ಬಡೇಕೊಳ್ಳ  ಘಾಟ್ ನಲ್ಲಿ ಚಾಲಕನ ಅಜಾಗರುಕತೆಯಿಂದ ಭೀಕರ ಅಪಘಾತ ಸಂಭವಿಸಿ, ಇಬ್ಬರು ಸಾವನ್ನಪ್ಪಿದ್ದಾರೆ.

ತಡ ರಾತ್ರಿ ಹುಬ್ಬಳ್ಳಿಯಿಂದ ಪುಣೆಗೆ ಹೊರಟ್ಟಿದ್ದ ಗೋಗಟೆ ಸಂಸ್ಥೆಗೆ ಸೇರಿದ ಬಸ್ ಪಲ್ಟಿಯಾಗಿದೆ. ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, 12 ಜನ ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಓರ್ವ‌ ಮಹಿಳೆ, ಓರ್ವ ಪುರುಷ ಸಾವನ್ನಪ್ಪಿದ್ದಾರೆ.‌ 

ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ಸಂಭವಿಸಿದ್ದು, ಅಪಘಾತ ಸಂಭವಿಸಿದ ಬಳಿಕ ಒಂಬತ್ತು ಜನರನ್ನು ಹಿರೇಬಾಗೇವಾಡಿ ಠಾಣೆ ಸಿಬ್ಬಂದಿ ಮತ್ತು ಸ್ಥಳೀಯರು ರಕ್ಷಣೆ ಮಾಡಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. 

Related Articles

Back to top button