ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದು ನಡೆಯಬೇಕಿದ್ದ ಎಫ್ ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, ವಾಣಿಜ್ಯ ತೆರಿಗೆ ವಿಚಕ್ಷಣಾ ಇನ್ಸ್ ಪೆಕ್ಟರ್ ಚಂದ್ರು ಸೇರಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ಉಪಕಾರ್ ಲೇಔಟ್ ನ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಲಾಗಿದ್ದು, ದಾಳಿ ವೇಳೆ ಪ್ರಕರಣದ ಕಿಂಗ್ ಪಿನ್ ಚಂದ್ರು, ರಾಚಪ್ಪ ಸೇರಿ 7 ಜನರನ್ನು ಬಂಧಿಸಲಾಗಿದೆ. 24 ಲಕ್ಷ ರೂಪಾಯಿ, 2 ವಾಹನ, ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಕೂಡ ಜಪ್ತಿ ಮಾಡಲಾಗಿದೆ.
ತೆರಿಗೆ ವಿಚಕ್ಷಣಾ ಇನ್ಸ್ ಪೆಕ್ಟರ್ ಆಗಿರುವ ಚಂದ್ರು, ಪ್ರಶ್ನೆ ಪತ್ರಿಕೆ ಪಡೆದು ಸೇಲ್ ಮಾಡುತ್ತಿದ್ದ. ಈತನ ಬಳಿ ಪೇಪರ್ ಪಡೆಯಲು ಬಂದ 5 ಜನರನ್ನು ಕೂಡ ಬಂಧಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ: ಎಫ್ ಡಿಎ ಪರೀಕ್ಷೆ ಹಠಾತ್ ಮುಂದೂಡಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ