Kannada NewsKarnataka NewsLatest
ಸಂಸ್ಕಾರ ಭಾರತಿಯಿಂದ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ

ಪ್ರಗಾತಿವಾಹಿನಿ ಸುದ್ದಿ, ಬೆಳಗಾವಿ – ಮಕರ ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ನಿಮಿತ್ಯ ಸಂಸ್ಕಾರ ಭಾರತಿ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ.
ಸಂಜೆ 4.30ರಿಂದ ಹಿಂದವಾಡಿಯ ಐಎಇಆರ್ ಸಭಾಭವನದಲ್ಲಿ ಕಾರ್ಯಕ್ರಮ ಆಯಜಿಸಲಾಗಿದೆ ಎಂದು ಸಂಸ್ಕಾರ ಭಾರತಿ ಅಧ್ಯಕ್ಷೆ ಡಾ.ನೀತಾ ದೇಶಪಂಡೆ ಹಾಗೂ ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ ತಿಳಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶ ಕುಮಾರ ಮೌರ್ಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವರು. ಹಿಂದುಸ್ತಾನಿ ಸಂಗೀತದ ಖ್ಯಾತ ಗಾಯಕ ಪಂಡಿತ ರಾಜಪ್ರಭು ದೋತ್ರೆ ಅವರನ್ನು ಸನ್ಮಾನಿಸಲಾಗುತ್ತದೆ.
ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಕೆಲಸವನ್ನು ಸಂಸ್ಕಾರ ಭಾರತಿ ಮಾಡುತ್ತಿದೆ. ದೇಶಾದ್ಯಂತ 1200ಕ್ಕೂ ಹೆಚ್ಚು ಶಾಖೆಗಳಿದ್ದು ಬೆಳಗಾವಿ ಶಾಖೆ ಕಳೆದ ಡಿಸೆಂಬರ್ 20ರಂದು ಆರಭಗೊಂಡಿದೆ. ಶಾಖೆಯ ಮೊದಲ ಕಾರ್ಯಕ್ರಮ ಭಾನುವಾರ ನಡೆಯುತ್ತಿದೆ.



