Kannada NewsKarnataka NewsLatest

ನಿಧಿ ಅರ್ಪಿಸಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅರಳಿಕಟ್ಟಿ ಗ್ರಾಮದ ವಿರಕ್ತಮಠದ ಶ್ರೀ  ಶಿವಮೂರ್ತಿ ಸ್ವಾಮೀಜಿಗಳು ಶ್ರೀ ರಾಮ ಜನ್ಮ ಭೂಮಿ ನಿಧಿ ಸಮರ್ಪಣಾ ಅಭಿಯಾನವನ್ನು ಸ್ವತಃ  ತಮ್ಮ ಮಠದಿಂದ ನಿಧಿ ಸಮರ್ಪಿಸುವ ಮೂಲಕ ಚಾಲನೆ ನೀಡಿದರು.

ಪ್ರತಿ ಊರು, ಪ್ರತಿ ಗ್ರಾಮದಲ್ಲಿ ಈ ಅಭಿಯಾನದ ಮುಖಾಂತರ  ಲಕ್ಷಾವದಿ ಜನರು ದೇಶದ ಸಂಸ್ಕೃತಿ ಉಳಿಸಿ ಬೆಳೆಸಿ ಭಾರತ ಮಾತೆ ವಿಶ್ವ ಗುರುವಾಗಲು ಸಹಕಾರಿಯಾಗಲಿ ಎಂದು ಆಶೀರ್ವಾದಿಸಿದರು.

Home add -Advt

ವಿಶ್ವ ಹಿಂದು ಪರಿಷತ್  ಕೋಶಾಧ್ಯಕ್ಷ ಕೃಷ್ಣ ಭಟ್  ಮಾತನಾಡುತ್ತ, ನಮ್ಮ ಶಕ್ತಿ ಇರುವುದೇ ಗ್ರಾಮೀಣ ಶ್ರಮ ಜೀವಿ ರೈತರು, ಮಾತೆಯರಲ್ಲಿ.  ಇವರೆಲ್ಲರ ಸಮರ್ಪಣೆ ಎಂದರೆ ದೇಶದ ಏಕತೆಯ ಸಂಕೇತ. ರಾಮ ಮಂದಿರದ ಈ ಮೂಲಕ ರಾಷ್ಟ್ರ ಮಂದಿರ ಆಗುವ ಮೂಲಕ ಇಡೀ ಜಗತ್ತಿಗೆ ಒಂದು ಐಕ್ಯತೆಯ ಸಂದೇಶ ಸಾರುವ ಇತಿಹಾಸ ನಿರ್ಮಿಸೋಣ ಎಂದು ಕರೆ ಕೊಟ್ಟರು.

ಬಾವಕಣ್ಣ ಲೋಹಾರ ಬಜರಂಗದಳದ ಜಿಲ್ಲಾ ಸಂಯೋಜಕ, ಮಂಜು ಪಾಟೀಲ, ರಾಮನಗೌಡಾ ಪಾಟೀಲ , ರವಿಪಾರ್ವತಿ, ಊರಿನ ಹಿರಿಯರು, ತಾಯಂದಿರು ಉಪಸ್ಥಿತರಿದ್ದರು.  ಶ್ರೀ ರಾಮನ ಪೂಜೆಯೊಂದಿಗೆ ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ನಿಧಿ ಸಮರ್ಪಿಸಿ ಊರಿನ ಎಲ್ಲಾ ಓಣಿ ಸಂಪರ್ಕ ಮಾಡಲು ಪ್ರಾರಂಭಿಸಿದರು.

Related Articles

Back to top button