ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಸಂಗಾತಿ ಗರ್ಭಿಣಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪುರುಷರು ಕಾಂಡೋಮ್ ಧರಿಸುವುದು, ವಾಸೆಕ್ಟಮಿ ಶಸ್ತ್ರಕ್ರಿಯೆಗೆ ಒಳಗಾಗುವುದು ಸಾಮಾನ್ಯ ಪದ್ಧತಿ. ಇದೀಗ ಅದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟು ಪುರುಷರಿಗೂ ನಿಗದಿತ ಅವಧಿ ವೀರ್ಯ ನಿಶ್ಚಲಗೊಳಿಸುವ ಮಾತ್ರೆ ಯಶಸ್ವಿ ಪ್ರಯೋಗ ಕಂಡಿದೆ.
ಶೀಘ್ರವೇ ಈ ಮಾತ್ರೆಗಳು ಮಾರುಕಟ್ಟೆಗೆ ಬರಲಿವೆ. ಕೆಲ ಪುರುಷರಿಗೆ ಮಕ್ಕಳನ್ನು ಹೊಂದುವ ವಿಚಾರ ಇರುವುದಿಲ್ಲ. ಆದರೆ ದೈಹಿಕ ಸಂಪರ್ಕದಿಂದ ದೂರ ಉಳಿಯುವುದೂ ಸಾಧ್ಯವಿರುವುದಿಲ್ಲ. ಅಂಥವರು ಸಹಜವಾದ ಲೈಂಗಿಕ ಕ್ರಿಯೆ ನಡೆಸಿ ತಮ್ಮ ುದ್ದೇಶ ಈಡೇರಿಸಿಕೊಳ್ಳಬಹುದಾಗಿದೆ.
ಈ ಮಾತ್ರೆ ಈಗಾಗಲೇ ಇಲಿಗಳ ಮೇಲೆ ಪ್ರಯೋಗವಾಗಿ ಯಶಸ್ಸು ಕಂಡಿದ್ದು ಮನುಷ್ಯರ ಮೇಲೂ ಪ್ರಯೋಗಕ್ಕೆ ಇದೀಗ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ಸಿದ್ಧವಾಗಿದೆ.
ಈ ಮಾತ್ರೆ ಸೇವಿಸಿದಲ್ಲಿ ಎರಡು ತಾಸುಗಳ ಕಾಲ ವೀರ್ಯಾಣುಗಳು ಚಲನಶೀಲತೆ ಕಳೆದುಕೊಳ್ಳುತ್ತವೆ. ಅವುಗಳಿಗೆ ಅಂಡಾಣುವಿನ ಜೊತೆ ಸಂಯೋಜನೆಗೊಳ್ಳುವ ಕ್ಷಮತೆ ಇರಲಾರದು. ಇದರಿಂದಾಗಿ ಗರ್ಭಧಾರಣೆ ಆಗುವುದಿಲ್ಲ.
ಸೈಡ್ ಎಫೆಕ್ಟ್ ಇಲ್ಲ:
ಈ ಮಾತ್ರೆ ಸೇವನೆಯಿಂದ ಯಾವುದೇ ಪ್ರತಿಕೂಲ ಪರಿಣಾಮ ಆಗಲಾರದು ಎಂದು ಅಧ್ಯಯನಗಳು ಹೇಳಿವೆ. ಮಹಿಳೆಯರು ಸೇವಿಸುವ ಗರ್ಭಪಾತದ ಮಾತ್ರೆಗಳು ದಿನಗಟ್ಟಲೆ, ವಾರಗಟ್ಟಲೆ ಕೆಲಸ ಮಾಡುತ್ತವೆ. ಇವು ಬಳಲಿಕೆ ಸೇರಿದಂತೆ ನಾನಾ ಬಗೆಯ ಪ್ರತಿಪರಿಣಾಮಗಳನ್ನು ದೇಹದಲ್ಲಿ ಉಂಟುಮಾಡುವುದಲ್ಲದೆ, ಹಾರ್ಮೋನ್ ಏರುಪೇರಿಗೂ ಕಾರಣವಾಗುತ್ತವೆ.
ಆದರೆ ಪುರುಷರು ಸೇವಿಸುವ ಈ ಮಾತ್ರೆಗಳು ಅಂಥ ಯಾವ ಸೈಡ್ ಎಫೆಕ್ಟ್ ಕೂಡ ಉಂಟು ಮಾಡುವುದಿಲ್ಲ. ಒಂದೇ ದಿನದಲ್ಲಿ ಇದರ ಪರಿಣಾಮ ಮುಗಿಯುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.
ಈ ಮಾತ್ರೆಗಳ ನಿಜವಾದ ಉಪಯೋಗ, ದುರುಪಯೋಗಗಳೆರಡೂ ಆಗಲಿದ್ದು ವಿಶ್ವಾದ್ಯಂತ ಇದು ಮಾರುಕಟ್ಟೆಗೆ ಬರುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿರುವವರ ಸಂಖ್ಯೆ ಅಷ್ಟಿಷ್ಟಲ್ಲ !
*ಕಲುಷಿತ ನೀರು ಸೇವಿಸಿ ಮೂವರು ಮಹಿಳೆಯರು ಸಾವು*
https://pragati.taskdun.com/contaminated-wateryadagiri3-deaths/
ಬೆಲೆ ನಿರ್ಧರಿಸುವುದು ವಸ್ತುವಿನ ಗುಣಕ್ಕೆ. ಮೌಲ್ಯ ನಿರ್ಧಾರವಾಗುವುದು ಶ್ರೇಷ್ಠತೆಯ ಗುಣಕ್ಕೆ
https://pragati.taskdun.com/the-price-is-determined-by-the-quality-of-the-material-value-is-determined-by-quality-of-excellence/
*ಮೂರು ತಿಂಗಳು ದಣಿವರಿಯದೇ ಕೆಲಸ ಮಾಡಿ: ಬಿಜೆಪಿ ಕಾರ್ಯಕರ್ತರಿಗೆ ಸಿಎಂ ಕರೆ*
https://pragati.taskdun.com/bjp-rathayatrecm-basavaraj-bommimeetingvidhanasabha-election/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ