Latest

ಗಾಲಿ ಜನಾರ್ದನ ರೆಡ್ಡಿ ವಿರುದ್ಧ FIR ದಾಖಲು

ಪ್ರಗತಿವಾಹಿನಿ ಸುದ್ದಿ, ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ FIR ದಾಖಲಿಸಲಾಗಿದೆ.

ರಾಜ್ಯ ವಿಧಾನಸಭೆಗೆ ಬುಧವಾರ ನಡೆದ ಚುನಾವಣೆಯ ಮತದಾನದ ವೇಳೆ ಜನಾರ್ದನ ರೆಡ್ಡಿಯವರು ಮತಗಟ್ಟೆ ಬಳಿ ಪ್ರಚಾರ ಮಾಡಿದ್ದಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Home add -Advt

ಗಂಗಾವತಿ ಕ್ಷೇತ್ರದ ಲಕ್ಷ್ಮೀ ಕ್ಯಾಂಪ್ ನ ನಿಷೇಧಿತ ಪ್ರದೇಶದಲ್ಲಿ ಜನಾರ್ದನ ರೆಡ್ಡಿ ಅವರು ನೀತಿ ಸಂಹಿತೆ ಉಲ್ಲಂಘಿಸಿ ತಮ್ಮ ಪಕ್ಷದ ಪರ ಪ್ರಚಾರ ಕೈಗೊಂಡಿದ್ದಾರೆ ಎಂದು ಆರೋಪಿಸಿ ಕ್ಷೇತ್ರದ ಚುನಾವಣಾಧಿಕಾರಿ ಸನಿತ್ ಸಿ. ಅವರು ಜನಾರ್ದನ ರೆಡ್ಡಿ ಅವರ ವಿರುದ್ಧ ದೂರು ದಾಖಲಿಸಿದ್ದು ಈ ಸಂಬಂಧ ಒಂದು ವಾಹನವನ್ನು ಸಹ ಜಪ್ತಿ ಮಾಡಿದ್ದಾರೆ.

https://pragati.taskdun.com/dr-sonali-sarnobat-who-campaigned-continuously-for-bjp-did-not-defect-even-if-she-lost-the-ticket/

https://pragati.taskdun.com/c-t-raviadmitedhospitalchikkamagalore/

https://pragati.taskdun.com/b-s-yedyurappareactionelection-result/

Related Articles

Back to top button