ಪ್ರಗತಿವಾಹಿನಿ ಸುದ್ದಿ: ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣಕ್ಕೆ ಮಹಿಳೆಯ ತಲೆ ಬೋಳಿಸಿ ಥಳಿಸಿರುವ ಅಮಾನವೀಯ ಘಟನೆ ತ್ರಿಪುರದ ಅಗರ್ತಲಾದಲ್ಲಿ ನಡೆದಿದೆ.
ಸಾಲದ ಕಂತು ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿ ಭಾಗಶಃ ಆಕೆಯ ತಲೆ ಬೋಳಿಸಿ ನೀಚ ಕೃತ್ಯವೆಸಗಲಾಗಿದೆ. ಘಟನೆಯ ಮಾಹಿತಿ ತಿಳಿದ ನಂತರ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಅಗರ್ತಲದ ಸ್ಥಳೀಯ ಸ್ವ-ಸಹಾಯ ಗುಂಪಿನ ಸಿಬ್ಬಂದಿ ಈ ರೀತಿ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, 20 ಸ್ಥಳೀಯ ಮಹಿಳೆಯರ ಗುಂಪು ಸಾಲ ಪಡೆದ ಮಹಿಳೆಯ ಮನೆಯಲ್ಲಿ ನೇರವಾಗಿ ಅಡುಗೆಮನೆಗೆ ನುಗ್ಗಿದ್ದು, ಹಲ್ಲೆ ನಡೆಸಿ ಮಹಿಳೆಯ ಅರ್ಧ ತಲೆ ಬೋಳಿಸಿದ್ದಾರೆ.
ಈ ಪ್ರಕರಣದಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಘಟನೆಯ ವಿರುದ್ಧ ತ್ರಿಪುರ ಸೇರಿದಂತೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ