*ನ್ಯೂ ಇಯರ್ ವೇಳೆ ನಡೆದ ಬೆಂಕಿ ಅವಘಡ: 47 ಜನ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಹೊಸ ವರ್ಷದ ಸಂಭ್ರಮಾಚರಣೆಯ ಸಮಯದಲ್ಲಿ ಜನಜಂಗುಳಿಯಿಂದ ಕೂಡಿದ್ದ ನೈಟ್ಕ್ಲಬ್ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿ 47 ಜನ ಸಾವನ್ನಪ್ಪಿದ್ದಾರೆ.
ಹೊಸ ವರ್ಷಾಚರಣೆ ಸಂಧರ್ಬದಲ್ಲಿ ಸ್ವಿಟ್ಟರ್ಲ್ಯಾಂಡ್ನಲ್ಲಿ ಸ್ಟೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್-ಮೊಂಟಾನಾದಲ್ಲಿರುವ ಲೆ ಕಾನ್ನೆಲೇಷನ್ ಬಾರ್ ಮತ್ತು ಲೌಂಜ್ನ ನೆಲಮಾಳಿಗೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಾವಿನ ಸಂಖ್ಯೆ 47 ಕ್ಕೆ ಏರಿಕೆಯಾಗಿದ್ದು, 115 ಜನರು ಗಾಯಗೊಂಡಿದ್ದಾರೆ ಎಂದು ಸ್ವಿಸ್ ಪೊಲೀಸರು ತಿಳಿಸಿದ್ದಾರೆ. ದುರಂತದ ಹಿನ್ನೆಲೆ ಯುರೋಪಿಯನ್ ದೇಶ ಐದು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ನಡೆಸುತ್ತಿದೆ.
ಕ್ರಾನ್ಸ್-ಮೊಂಟಾನಾದ ಆಲೈನ್ ರೆಸಾರ್ಟ್ನಲ್ಲಿರುವ ನೆಲಮಾಳಿಗೆಯಲ್ಲಿದ್ದ ಕಾನ್ನೆಲೇಷನ್ನಲ್ಲಿ ಮಧ್ಯರಾತ್ರಿಯ ವೇಳೆ ಈ ದುರಂತ ಸಂಭವಿಸಿದೆ. ಅಲ್ಲಿ ನೂರಾರು ಯುವ ಜನರು ಹೊಸ ವರ್ಷದ ಸಂಭ್ರಮದಲ್ಲಿ ಕಳೆಯುತ್ತಿದ್ದರು. ಗಾಯಗೊಂಡವರಲ್ಲಿ ಅನೇಕರು ತೀವ್ರ ಸುಟ್ಟಗಾಯಗಳಿಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಪಿಟ್ಟರ್ಲೆಂಡ್ನ ಅಧ್ಯಕ್ಷರು ಈ ದುರಂತವನ್ನು ಶಾಕಿಂಗ್ ಎಂದು ಬಣ್ಣಿಸಿದ್ದಾರೆ. ಸಂತ್ರಸ್ತರಿಗೆ ನೆರೆಯ ರಾಷ್ಟ್ರಗಳು ವೈದ್ಯಕೀಯ ನೆರವು ನೀಡಿವೆ.



