
ಪ್ರಗತಿವಾಹಿನಿ ಸುದ್ದಿ: ಮದುವೆ ಸಂಭ್ರಮದಲ್ಲಿ ನಡುರಸ್ತೆಯಲ್ಲಿ ಗ್ರಾಮ್ ಪಂಚಾಯತಿ ಸದಸ್ಯ ಗನ್ ನಿಂದ ಫೈರಿಂಗ್ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಮುಂಡರಗಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ರೌಡಿಶೀಟರ್ ಚಂದ್ರಶೇಖರ್ ಎಂಬುವವರಿಂದ ಮದುವೆ ಮೆರವಣಿಗೆಯಲ್ಲಿ ಡಬಲ್ ಬ್ಯಾರೆಲ್ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಚಂದ್ರಶೇಖರ್‌ನ್ನು ವಶಕ್ಕೆ ಪಡೆದಿದ್ದಾರೆ.
ಮದುವೆ ಮೆರವಣಿಗೆ ವೇಳೆ ರಸ್ತೆಯಲ್ಲಿ ಬಂದೂಕನ್ನ ಮೇಲೆತ್ತಿ ಫೈರಿಂಗ್ ಮಾಡಲಾಗಿದೆ. ಖುಷಿಯಾಗಿ ಆರೋಪಿ ಕಿರುಚಾಡಿದ್ದಾನೆ. ಸಂಭ್ರಮದ ಹೆಸರಲ್ಲಿ ಗೂಂಡಾಗಿರಿ ಮೆರೆದಿದ್ದಾನೆ.
ಎರಡು ಮೂರು ಸಲ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಸ್ಥಳದಲ್ಲಿದ್ದವರಿಗೆ ಕೊಂಚ ಆತಂಕ ಕೂಡ ಎದುರಾಗಿದೆ. ಸ್ಥಳೀಯ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಸದ್ಯ ಫೈರಿಂಗ್ ಮಾಡುವ ವಿಡಿಯೋ ವೈರಲ್ ಆಗಿದೆ.




