Latest

*ಸೇಡು ತೀರಿಸಿಕೊಳ್ಳಲು ಇವಳು ಮಾಡಿದ ಕೆಲಸಕ್ಕೆ ಐವರು ಸಾವು*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕಿಯೊಬ್ಬಳು ಮಾಡಿದ ಕಾಳುಮೆಣಸಿನ ಸೂಪ್ ಅನ್ನು ಸೇವಿಸಿ ಐವರು ಪ್ರಾಣ ಕಳೆದುಕೊಂಡಿರುವ ಘಟನೆ ನೈಜೀರಿಯಾದ ಎಡೋ ರಾಜ್ಯದಲ್ಲಿ ನಡೆದಿದೆ.

ಆಯಿಷಾ ಸುಲೈಮಾನ್ (16) ಬಂಧಿತ ಅಪ್ರಾಪ್ತ ಬಾಲಕಿ, ವರದಿಯ ಪ್ರಕಾರ, ಆಯಿಷಾ ತನ್ನ ಗೆಳೆಯ, 19 ವರ್ಷದ ಇಮ್ಯಾನುಯೆಲ್ ಎಲೋಜಿ ವಿರುದ್ಧ ಸೇಡನ್ನು ತೀರಿಸಿಕೊಳ್ಳುವ ಉದ್ದೇಶದಿಂದ ಸೂಪ್ ನಲ್ಲಿ ವಿಷ ಬೆರೆಸಿದ್ದಾಳೆ ಎಂದು ವರದಿಯಾಗಿದೆ.

ಉಜೈರುವಿನ ಅಫಾಶಿಯೊದಲ್ಲಿನ ಕೊಠಡಿಯೊಂದರಲ್ಲಿ ಐದು ಜನರು, ಇಬ್ಬರು ಸಹೋದರರು ಮತ್ತು ಒಂದು ಹೆಣ್ಣು ಸೇರಿದಂತೆ ಮೂವರ ಶವಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಐವರು ಕೊಠಡಿಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಕುಟುಂಬಸ್ಥರಿಗೆ ಅನುಮಾನ ಬಂದಿದೆ.

ಈ ವೇಳೆ ಪರಿಶೀಲಿಸಿದಾಗ ಐವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮಹಿಳೆಯ ಉದ್ದೇಶವು ತನ್ನ ಗೆಳೆಯನಿಗೆ ಸೂಪ್ ನೀಡುವುದಾಗಿತ್ತು, ಆದರೆ ಯುವಕ ಅದನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದು ಇತರ ನಾಲ್ವರ ಸಾವಿಗೆ ಕಾರಣವಾಗಿದೆ.‌ ಸದ್ಯ ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ವತಃ ಬಾಲಕಿಯೇ ಬಾಯಿಬಿಟ್ಟಿದ್ದು, ಆರೋಪಿ ಆಯಿಷಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Home add -Advt

Related Articles

Back to top button