
ಪ್ರಗತಿವಾಹಿನಿ ಸುದ್ದಿ: ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಐದು ಹಾವುಗಳು ಏಕಕಾಲಕ್ಕೆ ಕಾಣಿಸಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕನಕಪುರ ಗ್ರಾಮದಲ್ಲಿ ನಡೆದಿದೆ.
ಊರಿನ ಜನರು ಹೇಳುವ ಪ್ರಕಾರ ಈ ದೇವಸ್ಥಾನಕ್ಕೆ ಹಾಗೂ ಹಾವಿಗೆ ಯಾವುದೋ ನಂಟಿದೆ. ಏಕೆಂದರೆ ಕಳೆದ ವರ್ಷ ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೇವಾಲಯಕ್ಕೆ ಒಂದು ಹಾವು ಬಂದು ಹೋಗುತ್ತಿತ್ತಂತೆ. ಹಾಗಾಗಿ ಇಲ್ಲೇನೋ ವಿಶೇಷತೆ ಇದೆ ಅಂತಾರೆ ಗ್ರಾಮಸ್ಥರು. ಇನ್ನು ಈ ರೀತಿ ಹಾವುಗಳು ಬಂದಿದ್ದು ಜನರಲ್ಲಿ ಭಕ್ತಿಭಾವವನ್ನ ಹೆಚ್ಚು ಮಾಡಿದೆ.
ಇದು ಗ್ರಾಮಸ್ಥರಲ್ಲಿ ಆಶ್ಚರ್ಯವನ್ನ ಹುಟ್ಟುಹಾಕಿದೆ. ಇನ್ನು ಹಾವುಗಳು ದೇವಾಲಯದಲ್ಲಿ ಕಾಣಿಸಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಅದರಲ್ಲಿ ಹಾವುಗಳು ದೇವಸ್ಥಾನದ ಬಾಗಿಲ ಮೇಲೆ, ದೇವಿಯ ಮೂರ್ತಿಯ ಮೇಲೆ ಆಟವಾಡುವುದನ್ನ ನೋಡಬಹುದಾಗಿದೆ.