ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ-ಸೂರತ್, ಬೆಳಗಾವಿ-ಅಜ್ಮೀರ ವಿಮಾನ ಸೇವೆಯನ್ನು ಸ್ಟಾರ್ ಏರ್ ಸಂಸ್ಥೆ ರದ್ದುಗೊಳಿಸುತ್ತಿದೆ. ಜೂನ್ 14 ರಿಂದ ಈ ಮಾರ್ಗದ ವಿಮಾನಗಳು ಹಾರಾಟ ನಡೆಸುವುದಿಲ್ಲ ಎಂದು ಸ್ಟಾರ್ ಏರ್ ಸಂಸ್ಥೆ ತಿಳಿಸಿದೆ.
ಉಡಾನ್ ಯೋಜನೆಯಡಿ 2020ರ ಡಿಸೆಂಬರ್‌ನಲ್ಲಿ ಬೆಳಗಾವಿ-ಸೂರತ್, ಬೆಳಗಾವಿ-ಅಜ್ಮೀರ್ ವಿಮಾನ ಸೇವೆಯನ್ನು ಆರಂಭಿಸಲಾಗಿತ್ತು. 4 ವರ್ಷದ ಬಳಿಕ ವಿಮಾನಯಾನ ಸಂಸ್ಥೆ ಈ ಮಾರ್ಗದ ವಿಮಾನ ಹಾರಾಟ ರದ್ದುಗೊಳಿಸುತ್ತಿದೆ.
ಸ್ಟಾರ್ ಏರ್ ಸಂಸ್ಥೆ ಬೆಳಗಾವಿ-ಸೂರತ್, ಬೆಳಗಾವಿ-ಅಜ್ಮೀರ್ ವಿಮಾನ ಸೇವೆ ಸ್ಥಗಿತಗೊಳಿಸಲು ಕಾರಣವೇನು? ಎಂದು ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ ವಿಮಾನಗಳ ರೊಟೇಷನ್‌ಗಾಗಿ ಸೇವೆ ರದ್ದು ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ.
ಬೆಳಗಾವಿಯಿಂದ ಎರಡು ನಗರಗಳ ವಿಮಾನ ಸೇವೆಯನ್ನು ಜೂನ್‌ನಲ್ಲಿ ರದ್ದುಪಡಿಸಲಾಗುತ್ತದೆ. ಈಗಾಗಲೇ ಈ ಕುರಿತು ಮಾಹಿತಿ ನೀಡಲಾಗಿದ್ದು, ಮುಂಗಡ ಟಿಕೆಟ್ ಬುಕ್ಕಿಂಗ್ ಸಹ ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ