National

*ಮತ್ತೊಂದು ದೋಣಿ ದುರಂತ; 6 ಜನ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ದೋಣಿ ಮುಳುಗಿ 6 ಜನ ನಾಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಉಜಿನಿ ಅಣೆಕಟ್ಟೆಯಲ್ಲಿ ನಡೆದಿದೆ.

Home add -Advt

ಇಂದಾಪುರ ಹಸೀಲ್ ಸಮೀಪದ ಕಲಾಶಿ ಗ್ರಾಮದ ಬಳಿ ದೋಣಿ ಮುಳುಗಿದ್ದು, 6 ಜನರು ನಾಪತ್ತೆಯಾಗಿದ್ದಾರೆ. ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಉಜನಿ ಅಣೆಕಟ್ಟೆಯಲ್ಲಿ ಕೆಲ ಪುರಾತನ ರಚನೆ, ಪುರಾತನ ದೇವಾಲಯಗಳು ನೀರಿನಲ್ಲಿ ಮುಳುಗಿರುವ ಕುರುಹುಗಳಿದ್ದು, ಈಗ ಅಣೆಕಟ್ಟೆಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಇಲ್ಲಿನ ದೇವಾಲಯಗಳು, ಪುರಾತನ ರಚನೆಗಳು ಕಾಣಿಸುತ್ತಿವೆ. ಇದನ್ನು ನೋಡಲೆಂದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ದುರಂತ ನಡೆದಿರುವ ಶಂಕೆ ಇದೆ.


Related Articles

Back to top button