Kannada NewsKarnataka NewsLatest

*ಅರಣ್ಯವಾಸಿಯ ಅರ್ಜಿ ನಾಪತ್ತೆ; ಡಿವೈಎಸ್‌ಪಿ ಗೆ ದೂರು*

ಕರ್ತವ್ಯ ಚ್ಯುತಿಯ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹ- ರವೀಂದ್ರ ನಾಯ್ಕ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಯ ಕಡತ ಹುಡುಕಿಕೊಡಲು ಹಾಗೂ ಕರ್ತವ್ಯಚ್ಯುತಿವೆಸಗಿದ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಂಬಂಧ ಶಿರಸಿ ಡಿವೈಎಸ್‌ಪಿ ಅವರಿಗೆ ಫೀರ್ಯಾದಿ ದಾಖಲಿಸಿದ ಘಟನೆ ನಡೆದಿದೆ.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಸಮಕ್ಷಮದಲ್ಲಿ, ಅರ್ಜಿ ನಾಪತ್ತೆಯಾಗಿರುವ ಹಲಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾರ್ಗೆಟ್ ಕಾರ್ಲೂಯಿಸ್ ಫರ್ನಾಂಡಿಸ್ ನ್ಯಾಯ ಕೋರಿ ಡಿವೈಎಸ್‌ಪಿ ಗಣೇಶ ಕೆ ಎಲ್ ಅವರಿಗೆ, ಅವರ ಕಚೇರಿಯಲ್ಲಿ ಫೀರ್ಯಾದಿ ನೀಡಲಾಯಿತು.

ಫೀರ್ಯಾದುದಾರಳು ಸಿದ್ಧಾಪುರ ತಾಲೂಕ, ಕೋಡ್ಕಣಿ ಗ್ರಾಮ, ಫಾ.ಸ.ನಂ ೮ ರಲ್ಲಿ ೦-೫-೦ ಕ್ಷೇತ್ರಕ್ಕೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ೧೯೫೦ ರ ಪೂರ್ವದಿಂದಲೂ ಅತಿಕ್ರಮಿಸಿ, ಹಲಗೇರಿ ಗ್ರಾಮ ಪಂಚಾಯತ ವಾಸ್ತವ್ಯದ ಮನೆ ನಂ: ೧೬೭ ರಲ್ಲಿ ವಾಸ್ತವ್ಯ ಮಾಡಿಕೊಂಡು ಬಾಳೆ, ತೆಂಗು, ಹಣ್ಣು-ಹಂಪಲ ಬೆಳೆಸಿ ಸಾಗುವಳಿ ಮಾಡುತ್ತಾ ಅರಣ್ಯ ಭೂಮಿಯ ಮೇಲೆ ಅವಲಂಭಿತಳಾಗಿರುತ್ತೇನೆ. ಅಲ್ಲದೇ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿ ಜಿ.ಪಿ.ಎಸ್ ಸಹಿತ ಆಗಿದ್ದು, ಗ್ರಾಮ ಅರಣ್ಯ ಹಕ್ಕು ಸಮಿತಿಯಿಂದ ಅರ್ಜಿ ಮಂಜೂರಿಗೆ ಶಿಪಾರಸ್ಸು ಆಗಿದರ ಕುರಿತು, ಈ ಹಿಂದೆ ಸಿದ್ಧಾಪುರ ಪೋಲಿಸ್ ಠಾಣೆಗೆ ಫೀರ್ಯಾದಿ ನೀಡಿದರೂ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ ಎಂದು ಫೀರ್ಯಾದಿಯಲ್ಲಿ ಫೀರ್ಯಾದಿದಾರಳು ಉಲ್ಲೇಖಿಸಿದ್ದಾಳೆ.

ಈ ಸಂದರ್ಭದಲ್ಲಿ ಶಿರಸಿ ತಾಲೂಕ ಅಧ್ಯಕ್ಷ ಲಕ್ಷ್ಮಣ ಮಾಳ್ಳಕ್ಕನವರ, ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಕಾರ್ಲೂಸ್ ಆಗ್ನಲ್ ಫರ್ನಾಂಡಿಸ್ ಉಪಸ್ಥಿತರಿದ್ದರು.

ಅರ್ಜಿ ಹುಡುಕಿಕೊಡಿ:
ಅರಣ್ಯ ಹಕ್ಕು ಸಮಿತಿ ಅವರು ನೀಡಿದ ಎಲ್ಲಾ ಅರ್ಜಿಗಳು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಗ್ರಾಮ ಪಂಚಾಯತ ಅಭಿವೃಧ್ದಿ ಅಧಿಕಾರಿ ಲಿಖಿತ ಉತ್ತರ ನೀಡಿದರೇ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ಕಾರ್ಯಲಯವು ಫಿರ್ಯಾದಿದಾರಳ ಅರ್ಜಿ ಕಚೇರಿಗೆ ಸ್ವೀಕೃತಿಯಾದ ಕಡತದಲ್ಲಿ ಇರುವುದಿಲ್ಲ ಎಂದು ಉತ್ತರ ನೀಡಿದ್ದು ಇರುತ್ತದೆ. ಹಕ್ಕು ಮಾನ್ಯತೆ ಮಾಡುವ ದಿಶೆಯಲ್ಲಿ ಅರ್ಜಿಯನ್ನ ಹುಡುಕಿಕೊಟ್ಟು ನ್ಯಾಯ ಒದಗಿಸಿಕೊಡಬೇಕೆಂದು ಫೀರ್ಯಾದಿಯಲ್ಲಿ ಫೀರ್ಯಾದಿದಾರಳು ಉಲ್ಲೇಖಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button