Kannada NewsKarnataka NewsLatest

ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ರಾಜ್ಯದ ಕ್ಷೇತ್ರ ಯಾವುದು ಗೊತ್ತೇ? ಕೇಳಿದ್ರೆ ಶಾಕ್ ಆಗ್ತೀರಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ರಾಜ್ಯದ ಪ್ರವಾಸಿ ಕ್ಷೇತ್ರ ಯಾವುದು ಗೊತ್ತೇ? ಕೇಳಿದ್ರೆ ಶಾಕ್ ಆಗ್ತೀರಿ.

ರಾಜ್ಯ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಕ್ಷೇತ್ರ ಸವದತ್ತಿಯ ಯಲ್ಲಮ್ಮನ ಗುಡ್ಡ. ವರ್ಷಕ್ಕೆ 1.25 ಕೋಟಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಷ್ಟೊಂದು ಜನರನ್ನು ಸೆಳೆಯುವ ಕ್ಷೇತ್ರ ಮಂತ್ತೊಂದಿಲ್ಲ ಎಂದು ಅವರು ಹೇಳಿದ್ದಾರೆ.

Home add -Advt

ಧಾರ್ಮಿಕ ಪ್ರವಾಸ ಇರಬಹುದು, ಪರಿಸರ ಪ್ರವಾಸ ಇರಬಹುದು. ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಕ್ಷೇತ್ರ ಯಲ್ಲಮ್ಮನ ಗುಡ್ಡ, ವರ್ಷಕ್ಕೆ ಒಂದು ಕೋಟಿ 25 ಲಕ್ಷ ಜನರು ಇಲ್ಲಿಗೆ ಬರುತ್ತಾರೆ. ಮೈಸೂರು, ಹಳೆಬೀಡು ಸೇರಿದಂತೆ ಎಲ್ಲವೂ ಸೇರಿದರೂ ಇಷ್ಟು ಆಗುವುದಿಲ್ಲ. ಅದು ಧಾರ್ಮಿಕ ಕ್ಷೇತ್ರವೂ ಹೌದು, ಪ್ರವಾಸಿ ಕ್ಷೇತ್ರವೂ ಹೌದು. ದರೆ ಇದು ಪ್ರವಾಸಿ ಕ್ಷೇತ್ರ ಎಂದು ಗಂಭೀರವಾಗಿ ಪರಿಗಣಿಸಲಾಗಿಲ್ಲ. ಸೌಲಭ್ಯಗಳ ಕಡೆಗೂ ಲಕ್ಷ್ಯ ಕೊಟ್ಟಿಲ್ಲ ಎಂದು ಅವರು ಹೇಳಿದರು.

ಸವದತ್ತಿಗೆ ಚಕ್ಕಡಿ ತೆಗೆದುಕೊಂಡು ಬರುತ್ತಾರೆ. ಟ್ರ್ಯಾಕ್ಟರ್ ತೆಗೆದುಕೊಂಡು ಬರುತ್ತಾರೆ. ಇದೊಂದು ವಿಶೇಷ ಪ್ರವಾಸಿ ಕೇಂದ್ರ. ನಮ್ಮ ಗ್ಯಾರಂಟಿ ಸ್ಕೀಂ ನಿಂದ ಈ ಬಾರಿ ಸವದತ್ತಿಗೆ ಬರುವವರ ಸಂಖ್ಯೆ 1.50 ಕೋಟಿ ದಾಟಲಿದೆ ಎಂದು ಅವರು ತಿಳಿಸಿದರು.

Related Articles

Back to top button