Kannada NewsLatest

2.80 ಕೋಟಿ ವೆಚ್ಚದಲ್ಲಿ ಶಿವಯೋಗಿಗಳ ಧ್ಯಾನ ಮಂದಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

Home add -Advt

ಅಥಣಿ ಶಿವಯೋಗಿಗಳ ಧ್ಯಾನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದೆ.ಭೂತರಾಮನಟ್ಟಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುಮಾರು 3.5 ಎಕರೆ ಸುಂದರ ಜಾಗದಲ್ಲಿ ನಿರ್ಮಾಣವಾಗಲಿರುವ ಮಂದಿರ ಅದ್ಭುತ ಕೇಂದ್ರವಾಗಲಿದೆ ಎಂದು ಪ್ರಭುಚನ್ನಬಸವ ಸ್ವಾಮಿಗಳು ಹೇಳಿದರು.2.80 ಕೋಟಿ ರೂ ವೆಚ್ಚದಲ್ಲಿ ಧ್ಯಾನ ಮಂದಿರ, ಉಚಿತ ಪ್ರಸಾದ ನಿಲಯ, ವೃದ್ದಾಶ್ರಮ, ಸಮುದಾಯ ಭವನ, ಯಾತ್ರಿ ನಿವಾಸ ಮೊದಲಾದ ಯೋಜನೆಗಳಿವೆ ಎಂದು ಅವರು ಹೇಳಿದರು.ಸಮಸ್ಯೆಗಳಿರುವವರಿಗೆ ಸದಾ ಈ ಮಂದಿರ ತೆರೆದಿರುತ್ತದೆ ಎಂದು ಶ್ರೀಗಳು ಹೇಳಿದರು.ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮಿಗಳು, ಕಾರಂಜಿಮಠದ ಗುರುಸಿದ್ದಸ್ವಾಮಿಗಳು, ಶಿವಯೋಗಿದೇವರು ಸೇರಿದಂತೆ ಹಲವಾರು ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮ ಮುಂದುವರಿದಿದೆ.

Related Articles

Back to top button