ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಬುಧವಾರ ಖಾನಾಪುರ ತಾಲೂಕಿನ ಗೋಲಿಹಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಗಂಭೀರ ಅವಾಂತರ ಸಂಭವಿಸಿದೆ.
ಮೂವರು ಚಿಕ್ಕ-ಚಿಕ್ಕ ವಿದ್ಯಾರ್ಥಿನಿಯರು ಮತ್ತು ಒಬ್ಬ ಕೆಲಸದ ಆಯಾಳ ಮೈಮೇಲೆ ಬಿಸಿಯೂಟದ ಬಿಸಿ ಸಾರು ಬಿದ್ದು ಗಂಭೀರ ಗಾಯಗಳಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮಧ್ಯಾಹ್ನ ಅಂಗನವಾಡಿ ಮಕ್ಕಳಿಗೆ ಊಟ ಬಡಿಸುವಾಗ ಕೈಯಲ್ಲಿಯ ಬಿಸಿಯೂಟದ ಬಿಸಿಯಾದ ಸಾರು ತುಂಬಿದ ದೊಡ್ಡ ಪಾತ್ರೆ ಜಾರಿ ಮೈಮೇಲೆ ಬಿದ್ದು ಗಂಭೀರ ಸುಟ್ಟ ಗಾಯಗಳಾಗಿದೆ.
ಮೂವರು ಹೆಣ್ಣು ಮಕ್ಕಳಾದ ಸಂಜನಾ( 5 ವರ್ಷ), ಸಾನ್ವಿ( 5 ವರ್ಷ), ಸಮೀಕ್ಷಾ( 5 ವರ್ಷ) ಈ ಅವಘಡದಲ್ಲಿ ಬೆಂದು ಹೋಗಿದ್ದಾರೆ.
ಆಯಾ ಲೀಲಾವತಿ( 55 ವರ್ಷ)ಯ ಮುಖ, ಕೈ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ.
ಹಾಸಿಗೆ ಮೇಲೆ ವಿಲವಿಲ ಒದ್ದಾಡುತ್ತ ಕಿರುಚಾಡುತ್ತಿರುವ ಮೂರು ಹೆಣ್ಣು ಮಕ್ಕಳು, ಓರ್ವ ಆಯಾಗೆ ಗಂಭೀರ ಸುಟ್ಟ ಗಾಯಗಳನ್ನು ನೋಡಿದ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ